Friday, May 17, 2024
Homeಕರಾವಳಿಪುತ್ತೂರು; ಬಿಜೆಪಿಯ ಹಿರಿಯ ನಾಯಕರ ನಡೆಗೆ ಬೇಸತ್ತು ಬಿಜೆಪಿ ಮಂಡಲ ಕಚೇರಿಯಲ್ಲಿ ರಾಜೀನಾಮೆ ಪತ್ರ ಇಟ್ಟು...

ಪುತ್ತೂರು; ಬಿಜೆಪಿಯ ಹಿರಿಯ ನಾಯಕರ ನಡೆಗೆ ಬೇಸತ್ತು ಬಿಜೆಪಿ ಮಂಡಲ ಕಚೇರಿಯಲ್ಲಿ ರಾಜೀನಾಮೆ ಪತ್ರ ಇಟ್ಟು ಬಂದ ಗ್ರಾ.ಪಂ.ಸದಸ್ಯೆ

spot_img
- Advertisement -
- Advertisement -

ಪುತ್ತೂರು; ಬಿಜೆಪಿಯ ಹಿರಿಯ ನಾಯಕರ ನಡೆಗೆ ಬೇಸತ್ತು ಬಿಜೆಪಿ ಮಂಡಲ ಕಚೇರಿಯಲ್ಲಿ ಗ್ರಾ.ಪಂ.ಸದಸ್ಯೆ ರಾಜೀನಾಮೆ ಪತ್ರ ಇಟ್ಟು ಬಂದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಇತ್ತೀಚೆಗೆ ಇಬ್ಬರು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯೆ ರತ್ನಾವತಿ ಮೇರ್ಲ ಅವರು ಬಿಜೆಪಿ ಮಂಡಲ ಕಚೇರಿಯಲ್ಲಿ ರಾಜೀನಾಮೆ ಪತ್ರ ಇಟ್ಟು ಬಂದಿದ್ದಾರೆ.

ಆ.15ರಂದು ಬಿಜೆಪಿ ಕಚೇರಿಗೆ ತೆರಳಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರಲ್ಲಿ ರಾಜೀನಾಮೆ ಪತ್ರ ನೀಡಿದ್ದಾರೆ. ಇದನ್ನು ಮಾಜಿ ಶಾಸಕರು ಸ್ವೀಕರಿಸಲು ಒಪ್ಪದೇ ಇದ್ದಾಗ, ಅವರ ಟೇಬಲ್ ಮೇಲಿಟ್ಟು ಬಂದಿದ್ದೇನೆ ಎಂದು ರತ್ನಾವತಿ ಮೇರ್ಲ ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲದಿದ್ದರೂ ನನ್ನ ಹೆಸರನ್ನೇ ಬಿಜೆಪಿ ನಾಯಕರು ಹೇಳಿದರು.

ಆದರೆ ಕೊನೆಕ್ಷಣದಲ್ಲಿ ಗೀತಾ ಅವರನ್ನು ಅಧ್ಯಕ್ಷೆಯಾಗಿ ನೇಮಕ ಮಾಡಿದ್ದಾರೆ. ಕಾಂಗ್ರೇಸ್ ಹೋಗುತ್ತೇನೆ ಎಂದು ಗೀತಾ ಅವರು ಹೇಳಿದ ಕಾರಣ ಅವರನ್ನೇ ನಾಯಕರು ಅಧ್ಯಕ್ಷೆಯಾಗಿ ಮಾಡಿದರು. ಇದರಿಂದ ನನಗೆ ಅವರಿಗೆ ಮುಖಭಂಗವಾಗಿದ್ದು, ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ ಎಂದು ರತ್ನಾವತಿಯವರು ಹೇಳಿದ್ದಾರೆ.

30 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಕೆಲಸ ಮಾಡಿದವರಿಗಿಂತ ಇತ್ತಿಚೆಗೆ ಪಕ್ಷ ಸೇರಿದವರಿಗೆ ಬೆಲೆ ಜಾಸ್ತಿ ಹಾಗಾಗಿ ನೊಂದು ನಾನು ರಾಜೀನಾಮೆ ನೀಡಿದ್ದೇನೆ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷೇತ್ತರಳಾಗಿ ಇರುತ್ತೇನೆ ಎಂದಿದ್ದಾರೆ

- Advertisement -
spot_img

Latest News

error: Content is protected !!