Thursday, July 18, 2024
Homeತಾಜಾ ಸುದ್ದಿನಾಳೆ ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರ ಕ್ರಿಯೆ: ಅಭಿಮಾನಿಗಳಿಗೆ ಕುಟುಂಬಸ್ಥರಿಂದ ಆಹ್ವಾನ

ನಾಳೆ ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರ ಕ್ರಿಯೆ: ಅಭಿಮಾನಿಗಳಿಗೆ ಕುಟುಂಬಸ್ಥರಿಂದ ಆಹ್ವಾನ

spot_img
- Advertisement -
- Advertisement -

ಬೆಂಗಳೂರು: ಇತ್ತೀಚೆಗೆ ಥೈಲ್ಯಾಂಡ್ ನಲ್ಲಿ ಹೃದಯಾಘಾತದಿಂದ ನಿಧನರಾದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಉತ್ತರಕ್ರಿಯೆ ನಾಳೆ (ಆ. 16ರಂದು) ಮಲ್ಲೇಶ್ವರಂನ ಅವರ ತಂದೆಯ ಮನೆಯಲ್ಲಿ ನಡೆಯಲಿದೆ.

ನಮ್ಮ ಮನೆಯ ಮಗಳು ಶ್ರೀಮತಿ ಸ್ಪಂದನಾ ವಿಜಯ್ ರಾಘವೇಂದ್ರ (ಅಚ್ಚು)ಅವರು ದಿನಾಂಕ 6/08/2023ರ ಭಾನುವಾರದಂದು ನಮ್ಮನ್ನಗಲಿರುವುದು ನಿಮಗೆಲ್ಲರಿಗೂ ತಿಳಿದ ವಿಷಯ, ಉತ್ತರ ಕ್ರಿಯೆಯನ್ನ ದಿನಾಂಕ 16/08/2023ರ ಬುಧವಾರದಂದು ಮಲ್ಲೇಶ್ವರದ ಸ್ವಗೃಹದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಶಾಂತಿಹೋಮ ನಡೆಯಲಿದೆ. ಮಧ್ಯಾನ್ಹ 1 ಗಂಟೆಯಿಂದ ಕೋದಂಡರಾಮಪುರದ ಯಂಗ್‌ಸ್ಟರ್ನ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಂಡಿದ್ದೇವೆ. ಆದ್ದರಿಂದ ತಾವುಗಳು ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!