Thursday, July 16, 2026
Homeತಾಜಾ ಸುದ್ದಿಸಿಡಿಯಲ್ಲಿರುವುದು ನಾನೇ, ಯುವತಿ ಕೂಡ ಗೊತ್ತು: ರಮೇಶ್ ಜಾರಕಿಹೊಳಿ ಹೇಳಿಕೆ?

ಸಿಡಿಯಲ್ಲಿರುವುದು ನಾನೇ, ಯುವತಿ ಕೂಡ ಗೊತ್ತು: ರಮೇಶ್ ಜಾರಕಿಹೊಳಿ ಹೇಳಿಕೆ?

- Advertisement -
- Advertisement -

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟಸಿ ಹಾಕಿದ್ಧ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

ಇತ್ತೀಚೆಗೆ ತನಿಖಾಧಿಕಾರಿಗಳ ಮುಂದೆ ಗೌಪ್ಯವಾಗಿ ಹಾಜರಾಗಿ ವಿಚಾರಣೆ ಎದುರಿಸಿದ್ದ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ನಾನೇ. ಮತ್ತು ನನ್ನ ಜೊತೆಗಿದ್ದ ಯುವತಿ ಪರಿಚಯ ಇದೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಿಡಿಯಲ್ಲಿರುವ ಯುವತಿ ಯಾರು ಎಂಬುದೇ ಗೊತ್ತಿಲ್ಲ ಎಂದು ವಾದಿಸುತ್ತಲೇ ಬಂದಿದ್ದರು.

ಯುವತಿ ಪ್ರಾಜೆಕ್ಟ್ ರಿಪೋರ್ಟ್ ವಿಚಾರದಲ್ಲಿ ಪರಿಚಯ ಆಗಿದ್ದಳು. ಇನ್ನು, ಆಕೆಯನ್ನು ನಾನು ಅತ್ಯಾಚಾರ ಮಾಡಿಲ್ಲ. ಆಕೆಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದೇನೆ. ಹಾಗೂ ನನಗೆ ಗೊತ್ತಿಲ್ಲದಂತೆ ವೀಡಿಯೋ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಜಾರಕಿಹೊಳಿ ತನಿಖಾಧಿಕಾರಿ ಕವಿತಾ ಎದುರು ಹೇಳಿಕೊಂಡಿರುವುದು ದಾಖಲಾಗಿವೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.

- Advertisement -

Latest News

error: Content is protected !!