Thursday, June 4, 2026
Homeಕರಾವಳಿಮಂಗಳೂರು: ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಕೊರೊನಾ ಸೋಂಕಿಗೆ ಬಲಿ

ಮಂಗಳೂರು: ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಕೊರೊನಾ ಸೋಂಕಿಗೆ ಬಲಿ

- Advertisement -
- Advertisement -

ಮಂಗಳೂರು: ಮಂಗಳೂರಿನ ಕದ್ರಿ ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಬ್ಬಂದಿಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ನವೀನ್ ಆಂಡ್ರಾ (54) ಕೋವಿಡ್ ಸೋಂಕಿನಿಂದ ಮೃತಪಟ್ಟವರು. ನವೀನ್ ಅವರಿಗೆ ಮೇ. 9 ರಂದು ಕೋವಿಡ್ ಸೋಂಕು ದೃಢವಾಗಿತ್ತು.ಅದೇ ದಿನ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾದ ಅವರು ಚಿಕಿತ್ಸೆಗೆ ಸ್ಪಂದಿಸದೆ ಬಲಿಯಾಗಿದ್ದಾರೆ.

1997 ರಲ್ಲಿ ಸೇವೆ ಶುರು ಮಾಡಿದ್ದ ನವೀನ್, ಕದ್ರಿಯ ಅಗ್ನಿಶಾಮಕದಳದಲ್ಲಿ ಸಿಬ್ಬಂದಿಯಾಗಿದ್ದರು. ನವೀನ್ ಅವರು ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಂಗೀತದಂತಹ ಕಾರ್ಯಕ್ರಮಗಳಲ್ಲೂ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಉಳ್ಳಾಲ ಕೋಟೆಕಾರ್ ನಿವಾಸಿಯಾಗಿರುವ ನವೀನ್ ಅವರು ಹೆಂಡತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!