Saturday, June 6, 2026
Homeಕರಾವಳಿದ.ಕ. ಜಿಲ್ಲೆಯಲ್ಲಿ ಗ್ಯಾರೇಜ್, ಕನ್ನಡಕದ ಅಂಗಡಿ ತೆರೆಯಲು ಅವಕಾಶ: ಡಿಸಿ ಡಾ.ರಾಜೇಂದ್ರ

ದ.ಕ. ಜಿಲ್ಲೆಯಲ್ಲಿ ಗ್ಯಾರೇಜ್, ಕನ್ನಡಕದ ಅಂಗಡಿ ತೆರೆಯಲು ಅವಕಾಶ: ಡಿಸಿ ಡಾ.ರಾಜೇಂದ್ರ

- Advertisement -
- Advertisement -

ಮಂಗಳೂರು: ರಾಜ್ಯ ಸರಕಾರದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.21ರ ಮುಂಜಾನೆ 6 ಗಂಟೆಯವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಈ ಸಂದರ್ಭ ಕೋವಿಡ್ -19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿರುವ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜಿಲ್ಲೆಯಲ್ಲಿ ವಾಹನ ಶೋ ರೂಂ ಹೊರತುಪಡಿಸಿ ಎಲ್ಲಾ ಗ್ಯಾರೇಜ್‌ಗಳು ಮತ್ತು ಅಧಿಕೃತ ವಾಹನ ಸೇವಾ ಕೇಂದ್ರಗಳನ್ನು ಮುಂಜಾನೆ 6ರಿಂದ ಮಧ್ಯಾಹ್ನ 12ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದಲ್ಲದೆ ಮುಂಜಾನೆ 6ರಿಂದ ಮಧ್ಯಾಹ್ನ 12ರವರೆಗೆ ಕನ್ನಡಕದ ಅಂಗಡಿಗಳನ್ನು ಕೂಡ ತೆರೆದಿಡಬಹುದು ಎಂದು ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!