Sunday, April 28, 2024
Homeಕರಾವಳಿಕಾಸರಗೋಡು11 ವರ್ಷ ಪ್ರೇಯಸಿಯನ್ನು ಕೋಣೆಯೊಳಗೆ ಬಚ್ಚಿಟ್ಟ ಪ್ರಕರಣಕ್ಕೆ ಟ್ವಿಸ್ಟ್: ಕೊನೆಗೂ ಅಮರ ಪ್ರೇಮಿ ಬಿಚ್ಚಿಟ್ಟ...

11 ವರ್ಷ ಪ್ರೇಯಸಿಯನ್ನು ಕೋಣೆಯೊಳಗೆ ಬಚ್ಚಿಟ್ಟ ಪ್ರಕರಣಕ್ಕೆ ಟ್ವಿಸ್ಟ್: ಕೊನೆಗೂ ಅಮರ ಪ್ರೇಮಿ ಬಿಚ್ಚಿಟ್ಟ ಅಸಲಿಯತ್ತು

spot_img
- Advertisement -
- Advertisement -

ಕೇರಳ​: ಸುಮಾರು 11 ವರ್ಷಗಳ ಕಾಲ ತನ್ನ ಒಂಟಿ ಕೋಣೆಯಲ್ಲಿ ಪ್ರೇಯಸಿಯನ್ನು ಯಾರಿಗೂ ಗೊತ್ತಾಗದಂತೆ ಪ್ರಿಯಕರ ಬಚ್ಚಿಟ್ಟಿದ್ದ ಪ್ರಕರಣಕ್ಕೆ ಇದೀಗ ಬಿಗ್  ಟ್ವಿಸ್ಟ್ ಸಿಕ್ಕಿದೆ.  ಮಾಧ್ಯಮಗಳ ಮುಂದೆ ಪ್ರಿಯಕರ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನ. ಇದೀಗತನ್ನ ಕುಟುಂಬದವರಿಗೆ ಹೆದರಿ ಈ ರೀತಿ ಪತ್ನಿಯನ್ನು ಬಚ್ಚಿಟ್ಟಿದ್ದಾಗಿ ಅವನು ಹೇಳಿ ಕೊಂಡಿದ್ದಾನೆ. ಇದಲ್ಲದೇ ಇಷ್ಟು ವರ್ಷಗಳ ಕಾಲ ಆಕೆಯನ್ನು ಹೀಗೆ ಹೇಗೆ ಬಚ್ಚಿಡೋದಕ್ಕೆ ಸಾಧ್ಯವಾಯಿತು ಅನ್ನೋದನ್ನು ಬಾಯ್ಬಿಟ್ಟಿದ್ದಾನೆ.

 ಪ್ರೇಯಸಿಯನ್ನು ದೀರ್ಘ ಕಾಲ ಬಚ್ಚಿಡಲು ಪೊಲೀಸರು ಮತ್ತು ಸ್ಥಳೀಯ ಜನರು ಸಹ ನೆರವು ನೀಡಿದ್ದರು ಎಂದು ತಿಳಿಸಿದ್ದಾನೆ.ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಕರ, ತನ್ನ ಕುಟುಂಬದ ಭಯಕ್ಕೆ ಹೆದರಿ ಪ್ರೇಯಸಿಯನ್ನು ತನ್ನ ಕೋಣೆಯಲ್ಲಿಯೇ ಕೂಡಿಟ್ಟಿದೆ. ನನ್ನ ಹೊಸ ಜೀವನಕ್ಕೆ ಪೊಲೀಸರು ಮತ್ತು ಸ್ಥಳೀಯ ಜನರು ಸಾಥ್​ ನೀಡುತ್ತಿದ್ದರು. ಸ್ಟೌವ್ ಮತ್ತು ಇತರೆ ಗೃಹಬಳಕೆಯ ವಸ್ತುಗಳನ್ನು ಸಹ ಪೊಲೀಸರು ನೀಡಿದ್ದರು. ಸಣ್ಣದಾದ ಕೋಣೆಯಲ್ಲಿ ಇಬ್ಬರು ಸಂತೋಷದ ಜೀವನ ನಡೆಸುತ್ತಿದೆವು. ಅಕ್ಕಪಕ್ಕದ ಜನರು ಸಹ ನಮ್ಮ ನೆರವಿಗೆ ನಿಂತರು ಎಂದು ಹೇಳಿಕೊಂಡಿದ್ದಾನೆ.

ಇದ್ದ ಸ್ಥಳವನ್ನು ಬಿಟ್ಟು ಹೋಗಲು ನಾನು ಸ್ವಲ್ಪ ಹಣಕ್ಕಾಗಿ ಕಾಯುತ್ತಿದ್ದೆ. ಆದರೆ ಅದು ವಿಳಂಬವಾಯಿತು. ನಂತರ ನಾನು ಎಲ್‌ಐಸಿಯಿಂದ ಸ್ವಲ್ಪ ಮೊತ್ತಕ್ಕಾಗಿ ಕಾಯುತ್ತಿದ್ದೆ. ಆದರೆ ಅದು ಕೂಡ ವಿಳಂಬವಾಯಿತು. ಇದರ ನಡುವೆ ನನ್ನ ಕುಟುಂಬ ಹಣ ಸ್ವೀಕರಿಸಿದೆ ಎಂದು ತಿಳಿಯಿತು. ಮನೆಗೆ ಗೊತ್ತಾಗದಂತೆ ಹೇಗೋ ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದು ಹೇಳಿಕೊಂಡಿದ್ದಾನೆ.

ಇದ್ದ ಸಣ್ಣ ಕೋಣೆಯಲ್ಲಿ ಎಲ್ಲವನ್ನು ಅಳವಡಿಸಿದ್ದೆ. ಟಿವಿ ಸೇರಿದಂತೆ ಪ್ರತಿಯೊಂದು ಇತ್ತು. ಆಕೆ ನನ್ನೊಂದಿಗೆ ಹೊಂದಿಕೊಂಡಿದ್ದಳು. ಪ್ರತಿದಿನ ನನ್ನ ಕೋಣೆಗೆ ಮನೆಯಿಂದ ಆಹಾರ ತೆಗೆದುಕೊಂಡು ಹೋಗಿ ಇಬ್ಬರು ಹಂಚಿಕೊಳ್ಳುತ್ತಿದ್ದೆವು. ಆರಂಭದಲ್ಲಿ ಕೆಲವೇ ದಿನ ಆಕೆಯನ್ನು ಬಚ್ಚಿಡಲು ನಿರ್ಧರಿಸಿದ್ದೆ. ಆದರೆ, ಕಾಲಚಕ್ರ ಹಾಗೇ ಉರುಳಿತು ಎಂದಿದ್ದಾನೆ. ಇದೀಗ ಮಹಿಳೆಯು ಸಹ ಆಕೆಯ ಕುಟುಂಬದೊಂದಿಗೆ ಮಾತನಾಡಿದ್ದು, ಅವರು ಕೂಡ ಸಂತೋಷವಾಗಿದ್ದಾರೆ  ಎಂದಿದ್ದಾನೆ.

- Advertisement -
spot_img

Latest News

error: Content is protected !!