Monday, April 29, 2024
Homeತಾಜಾ ಸುದ್ದಿಸರ್ಕಾರದಿಂದ ಹೊಸ ಮಾರ್ಗ ಸೂಚಿ ಪ್ರಕಟ: ರಾಜ್ಯದಾದ್ಯಂತ ಅಗತ್ಯ ಸೇವೆಗಳು ಹೊರತುಪಡಿಸಿ ಇಂದಿನಿಂದ ಎಲ್ಲವೂ ಬಂದ್

ಸರ್ಕಾರದಿಂದ ಹೊಸ ಮಾರ್ಗ ಸೂಚಿ ಪ್ರಕಟ: ರಾಜ್ಯದಾದ್ಯಂತ ಅಗತ್ಯ ಸೇವೆಗಳು ಹೊರತುಪಡಿಸಿ ಇಂದಿನಿಂದ ಎಲ್ಲವೂ ಬಂದ್

spot_img
- Advertisement -
- Advertisement -

ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಲಾಗಿತ್ತು. ಈ ವೇಳೆಯಲ್ಲಿ ಅಗತ್ಯಸೇವೆ ಒದಗಿಸುವಂತ ಇಲಾಖೆ ಜೊತೆಗೆ, ಇತರೆ ಸೇವೆ ಒದಗಿಸುವಂತ ಇಲಾಖೆಗಳಿಗೂ ಅವಕಾಶ ನೀಡಲಾಗಿತ್ತು. ಆದ್ರೇ.. ಇದೀಗ ಕೊರೋನಾ ನೈಟ್ ಕರ್ಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಇಂತಹ ಮಾರ್ಗಸೂಚಿಯಲ್ಲಿ ಅಗತ್ಯ ಸೇವೆ ಹೊರತಾಗಿ, ಎಲ್ಲಾ ಶಾಪ್ ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿ ಕ್ರಮದಂತೆ ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯದಾದ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ  ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಯಾವೆಲ್ಲಾ ಸೇವೆಗಳು ಬಂದ್

ಬಟ್ಟೆ ಅಂಗಡಿಗಳು

ಶಾಪಿಂಗ್ ಮಾಲ್ ಗಳು

ಜ್ಯುವೆಲ್ಲರಿ ಶಾಪ್ ಗಳು

ಮೊಬೈಲ್ ಶಾಪ್ ಗಳು

ಟೀ ಸ್ಟಾಲ್ ಗಳು

ಜ್ಯೂಸ್ ಸೆಂಟರ್ ಗಳು

ಫುಡ್ ಸೆಂಟರ್ಸ್

ಫ್ಯಾನ್ಸಿ ಸ್ಟೋರ್ಸ್

ಲಭ್ಯವಿರುವ ಸೇವೆಗಳು

1) ಸಿಮೆಂಟ್ ಗಳು

2)ಹಾರ್ಡ್ ವೇರ್ ಶಾಪ್ ಗಳು

3) ಕೃಷಿ ಉಪಕರಣಗಳ ಮಳಿಗೆಗಳು

4) ಹೋಟೆಲ್ , ಬೇಕರಿಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ

5) ಮೆಡಿಕಲ್ ಶಾಪ್ ಗಳು

6) ಸೆಲೂನ್ ಗಳು

7) ಆಸ್ಪತ್ರೆ

8) ದಿನಸಿ ಅಂಗಡಿಗಳು

9)ಹಾಲು, ಮಾಂಸ, ತರಕಾರಿ ಅಂಗಡಿಗಳು

10) ಮದ್ಯಂಗಡಿಗಳು

- Advertisement -
spot_img

Latest News

error: Content is protected !!