Thursday, May 16, 2024
Homeತಾಜಾ ಸುದ್ದಿಮಗನ ಹುಟ್ಟುಹಬ್ಬದಂದು ಬೆತ್ತಲಾದ ನಟಿಯನ್ನು ಜೈಲಿಗಟ್ಟಿದ ನ್ಯಾಯಾಲಯ

ಮಗನ ಹುಟ್ಟುಹಬ್ಬದಂದು ಬೆತ್ತಲಾದ ನಟಿಯನ್ನು ಜೈಲಿಗಟ್ಟಿದ ನ್ಯಾಯಾಲಯ

spot_img
- Advertisement -
- Advertisement -

ಘಾನಾ: ಬಾಲಕನ ಮುಂದೆ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ ಘಾನಾ ಮೂಲದ ನಟಿಯನ್ನು ಬಂಧಿಸಲಾಗಿದ್ದು, 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ‘ಕೌಂಟುಂಬಿಕ ಹಿಂಸೆ’ ಮತ್ತು ‘ಅಕ್ಷೇಪಾರ್ಹ ಅಂಶ’ವೆಂದು ನ್ಯಾಯಾಲಯ ಪರಿಗಣಿಸಿ ಶಿಕ್ಷೆ ವಿಧಿಸಿದೆ.

ಘಾನಾದಲ್ಲಿ ಅಕುವಪೆಮ್​ ಪೊಲೋ ಎಂದೇ ಪರಿಚತರಾಗಿರುವ ನಟಿ ರೋಸ್​ಮಂಡ್​ ಬ್ರೌನ್ ತನ್ನ ಸ್ವಂತ ಮಗ ನ 7ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ರೀತಿಯ ಅಶ್ಲೀಲತೆಯನ್ನು ಪ್ರಚೋದಿಸಿ ಅನೇಕರ ಕೆಂಗಣ್ಣಿಗೆ ನಟಿ ಗುರಿಯಾಗಿದ್ದಾರೆ.

ಈ ಘಟನೆ 2020ರ ಜೂನ್​ನಲ್ಲಿ ನಡೆದಿತ್ತು. ನಟಿ ರೋಸ್​ಮಂಡ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿಕೊಂಡಿದ್ದರು. ಇದಾದ ಬಳಿಕ ನಟಿಯ ವಿರುದ್ಧ ಪ್ರಕರಣ ದಾಖಲಾಗಿ, ಅಂದಿನಿಂದ ವಿಚಾರಣೆ ನಡೆಯುತ್ತಲೇ ಇತ್ತು. ಕೊನೆಗೂ ಘಾನಾ ರಾಜಧಾನಿ ಅಕ್ರಾದಲ್ಲಿರುವ ನ್ಯಾಯಾಲಯ ನಟಿ ವರ್ತನೆ ‘ಕೌಂಟುಂಬಿಕ ಹಿಂಸೆ’ ಮತ್ತು ‘ಅಕ್ಷೇಪಾರ್ಹ ಅಂಶ’ವೆಂದು ಪರಿಗಣಿಸಿ 90 ದಿನಗಳು ಸಾಧಾರಣ ಶಿಕ್ಷೆಯನ್ನು ವಿಧಿಸಿದೆ.

- Advertisement -
spot_img

Latest News

error: Content is protected !!