ಮಂಗಳೂರು :ಮಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಇಂದು ನಗರದ ಬೋಳೂರು ಪರಿಸರದ 51 ವರ್ಷದ ಗಂಡಸಿಗೆ ಕೊರೊನ ಸೋಂಕು ದೃಢಪಟ್ಟಿದೆ. ಇವರು ಕಳೆದ ಕೆಲವು ದಿನಗಳ ಹಿಂದೆ ಸೋಂಕು ದೃಢ ಪಟ್ಟ ರೋಗಿ ಸಂಖ್ಯೆ 536 ರ ಕೊರೊನ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಬೋಳೂರಿನ 58 ವರ್ಷದ ಮಹಿಳೆ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕಳೆದ 15 ದಿನಗಳ ಹಿಂದೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಇಲ್ಲಿ ಪಿ-501 ಸಂಪರ್ಕಕ್ಕೆ ಬಂದಿದ್ದ ಇವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದಾದ ಬಳಿಕ ಮೇ 1 ರಂದು ಮಹಿಳೆಯ 62 ವರ್ಷದ ಪತಿಯಲ್ಲೂ ಸೋಂಕು ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಬೋಳಾರಿನ ನಿವಾಸಿ, 51 ವರ್ಷದ ವ್ಯಕ್ತಿಗೂ ಇದೀಗ ಸೋಂಕು ಬಾಧಿಸಿದ್ದು, ಒಂದೇ ಪ್ರದೇಶದಲ್ಲಿ ಮೂವರು ಸೋಂಕು ಪೀಡಿತರಿದ್ದಾರೆ.ಈ ಮೂವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ
ಕನಾಟಕ ರಾಜ್ಯದಲ್ಲಿ ಇಂದು ಹೊಸ 8 ಪ್ರಕರಣಗಳು ದೃಢ ಪಡುವುದರೊಂದಿಗೆ ಸೋಂಕಿತರ ಸಂಖ್ಯೆ 659 ಕ್ಕೆ ಏರಿದೆ