Monday, September 9, 2024
Homeತಾಜಾ ಸುದ್ದಿಮದ್ಯದ ಅಮಲಿನಲ್ಲಿ ಮಗನ ತುಟಿ ತುಂಡರಿಸಿದ ತಾಯಿ..!

ಮದ್ಯದ ಅಮಲಿನಲ್ಲಿ ಮಗನ ತುಟಿ ತುಂಡರಿಸಿದ ತಾಯಿ..!

spot_img
- Advertisement -
- Advertisement -

ಕೆ.ಅರ್.ಪೇಟೆ,ಮೇ.5- ಮಾರಕ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 43 ದಿನಗಳಿಂದ ಮದ್ಯ ಸಿಗದೆ ಕಂಗಲಾಗಿದ್ದ ಮಹಿಳೆಯೊಬ್ಬಳು ಎಣ್ಣೆ ಸಿಗುತ್ತಿದ್ದಂತೆ ಕಂಠ ಪೂರ್ತಿ ಕುಡಿದು ಫುಲ್ ಟೈಟಾಗಿ, ಮತ್ತಿನಲ್ಲಿ ಹೆತ್ತ ಮಗನನ್ನೆ ಹೊಡೆದು ತುಟಿ ಕಚ್ಚಿ ತುಂಡರಿಸಿರುವ ಘಟನೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ.

ದಿ.ರಂಗನಾಥ ಎಂಬಾತನ ಪತ್ನಿ ಪಾರ್ವತಿ ಕುಡಿದ ಮತ್ತಿನಲ್ಲಿ ತನ್ನ ಮಗ ಮೋಹನ್ (28) ಎಂಬವನ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ .

ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿರುವ ಯುವಕನ ಪತ್ನಿ ಜಗಳ ಬಿಡಿಸಲು ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ. ಮದ್ಯದ ಅಮಲಿನಲ್ಲಿ ಮಗನ ತುಟಿಯನ್ನು ಕಚ್ಚಿ ಬಲವಾಗಿ ಎಳೆದು ತುಂಡರಿಸಿದ್ದಾಳೆ.

ಆಕೆಯ ದಾಳಿಗೆ ಮಗನ ಇಡಿ ತುಟಿ ಭಾಗವೇ ತುಂಡರಿಸಿ ಹೋಗಿದೆ. ಕೂಡಲೇ ಅಕ್ಕ ಪಕ್ಕದ ಜನರು ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿ ತುರ್ತು ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ ಎಂಬ ವೈದ್ಯರ ಸಲಹೆ ಮೇರೆಗೆ ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -
spot_img

Latest News

error: Content is protected !!