Saturday, June 6, 2026
Homeಕರಾವಳಿಹಿರೇಬಂಡಾಡಿಗೂ ವಕ್ಕರಿಸಿದ ಕೊರೋನಾ: 25 ರ ಹರೆಯದ ಯುವಕನಿಗೆ ಸೋಂಕು ದೃಢ

ಹಿರೇಬಂಡಾಡಿಗೂ ವಕ್ಕರಿಸಿದ ಕೊರೋನಾ: 25 ರ ಹರೆಯದ ಯುವಕನಿಗೆ ಸೋಂಕು ದೃಢ

- Advertisement -
- Advertisement -

ಉಪ್ಪಿನಂಗಡಿ: ಕೊರೋನಾ ಮಹಾಮಾರಿ ಗ್ರಾಮೀಣ ಪ್ರದೇಶವಾದ ಹಿರೇಬಂಡಾಡಿಗೂ ಬಂದು ತಲುಪಿದೆ. ಗ್ರಾಮದ ಕೊಳ್ಳೇಜಾಲ್‌ ನ ನಿವಾಸಿಯಾದ 25 ರ ಹರೆಯದ ಈ ಯುವಕನಿಗೆ ಜ್ವರ ಕಾಣಿಸಿಕೊಂಡಿದ್ದು ಆತನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಗಂಟಲು ದ್ರವ ಪರೀಕ್ಷೆ ನಡೆದಿದ್ದು, ಅದರ ವರದಿಯಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಈ ಬಗ್ಗೆ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ. ಈತನ ಮನೆಗೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳ ತಂಡ ಹಾಗೂ ಹಿರೇಬಂಡಾಡಿ ಗ್ರಾ.ಪಂ ಅಧ್ಯಕ್ಷ ಶೌಕತ್‌ ಅಲಿ ಮತ್ತಿತರರು ಭೇಟಿ ನೀಡಿದ್ದು ಮನೆಯನ್ನು ಸೀಲ್‌ ಡೌನ್‌ ಗೊಳಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಹೈದರಾಬಾದ್ ನಲ್ಲಿ ವೃತ್ತಿ ಮಾಡುತ್ತಿದ್ದು, ಕೆಲದಿನಗಳ ಹಿಂದೆ ಊರಿಗೆ ಬಂದಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!