Thursday, May 9, 2024
Homeಚಿಕ್ಕಮಗಳೂರುಅಯೋಧ್ಯಾದಲ್ಲಿ ಸ್ಥಾಪನೆಯಾಗಲಿದೆ ಶೃಂಗೇರಿ ಶಾಖಾ ಮಠ

ಅಯೋಧ್ಯಾದಲ್ಲಿ ಸ್ಥಾಪನೆಯಾಗಲಿದೆ ಶೃಂಗೇರಿ ಶಾಖಾ ಮಠ

spot_img
- Advertisement -
- Advertisement -

ಶೃಂಗೇರಿ: ಅಯೋಧ್ಯೆಯಲ್ಲಿ ಶೃಂಗೇರಿ ಮಠದ ಶಾಖಾ ಮಠ ಸ್ಥಾಪನೆಯಾಗಲಿದೆ. ಶಾಖಾ ಮಠ ಸ್ಥಾಪನೆ ಬಗ್ಗೆ ಶೃಂಗೇರಿ ಮಠದಿಂದ ಅಧಿಕೃತ ‌ಪ್ರಕಟಣೆ ಹೊರಡಿಸಲಾಗಿದೆ.

ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಸಮೀಪವಿರುವ ಅಯೋಧ್ಯೆಯ ರಾಮ್ ಕೋಟ್ ನಲ್ಲಿರುವ ಸುಂದರ್ ಸದನ್ ನಲ್ಲಿ ಶಾಖಾ ಮಠ ಸ್ಥಾಪನೆಯಾಗಲಿದೆ. ಸುಂದರ್ ಸದನ್ ಆವರಣದಲ್ಲಿರುವ ರಾಮ ಪರಿವಾರ ಮತ್ತು ರಾಧಾಕೃಷ್ಣನ ದೇವಸ್ಥಾನಗಳು ಜೀರ್ಣೋದ್ಧಾರವಾಗಲಿದ್ದು, ಶಾರದಾಂಬಾ ಮತ್ತು ಜಗದ್ಗುರು ಆದಿ ಶಂಕರಾಚಾರ್ಯರ ಹೊಸ ದೇವಸ್ಥಾನಗಳು ನಿರ್ಮಾಣವಾಗಲಿವೆ‌.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಧರ್ಮಶಾಲಾ ನಿರ್ಮಾಣವಾಗಲಿದ್ದು, ಈಗಾಗಲೇ ಕಾಶಿ, ರಾಮೇಶ್ವರಂ, ಪ್ರಯಾಗ್, ಮಥುರಾ, ನಾಸಿಕ್, ಶ್ರೀಶೈಲ ಮತ್ತು ತಿರುಪತಿ ಮೊದಲಾದ ಕಡೆ ಶೃಂಗೇರಿ ಮಠದಿಂದ ನಿರ್ವಹಿಸುತ್ತಿರುವ ಎಲ್ಲಾ ವ್ಯವಸ್ಥೆಗಳು ಕೂಡಾ ಅಯೋಧ್ಯಾ ಶಾಖಾ ಮಠದಲ್ಲಿ ಲಭ್ಯವಾಗಲಿವೆ.

ಅಲ್ಲದೇ ಪ್ರವಚನ ಮಂದಿರ ಮತ್ತು ಹೋಮ ಕಾರ್ಯಕ್ಕೆ ಅನುಕೂಲಕರವಾದ ವ್ಯವಸ್ಥೆಯನ್ನೂ ಅಯೋಧ್ಯಾ ಶಾಖಾ ಮಠ ಹೊಂದಿರಲಿದ್ದು, ಸಂಬಂಧಿತ ಪ್ರಾಧಿಕಾರದಿಂದ ಅಗತ್ಯ ಅನುಮೋದನೆ ದೊರಕಿದ ಕೂಡಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ.

- Advertisement -
spot_img

Latest News

error: Content is protected !!