Monday, April 29, 2024
Homeಕರಾವಳಿಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥ ಕೊಡುಗೆ; ಭಂಡಿರಥ ನಿರ್ಮಿಸಲಿರುವ ಕೋಟೇಶ್ವರದವರಿಗೆ ವೀಳ್ಯ ನೀಡಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥ ಕೊಡುಗೆ; ಭಂಡಿರಥ ನಿರ್ಮಿಸಲಿರುವ ಕೋಟೇಶ್ವರದವರಿಗೆ ವೀಳ್ಯ ನೀಡಿ ಗೌರವ

spot_img
- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥವನ್ನು ದಾನಿಯೊಬ್ಬರು ಕೊಡುಗೆಯಾಗಿ ನೀಡಿದ್ದಾರೆ.

ಕೊಡುಗೆಯಾಗಿ ನೀಡಿದ ಭಂಡಿರಥವನ್ನು ನಿರ್ಮಿಸಲಿರುವ ಕೋಟೇಶ್ವರದವರಿಗೆ ದೇವಸ್ಥಾನದ ಕಡೆಯಿಂದ ವೀಳ್ಯವನ್ನು ನೀಡಿ ಗೌರವಿಸಲಾಯಿತು.

ಮೋಹನದಾಸ್ ರೈ ಅವರ ಅಪ್ತರಾಗಿದ್ದ ಹೈದರಬಾದ್ ಮೂಲದ ಸಾಯಿ ಶ್ರೀನಿವಾಸ್ ಇತ್ತಿಚೆಗೆ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಈ ಕೊಡುಗೆ ಘೋಷಣೆ ಮಾಡಿದ್ದರು.

ಸಾಯಿ ಶ್ರೀನಿವಾಸ್ ಅವರ ನಿರ್ದೇಶನದಂತೆ ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು ಹಾಗೂ ಸುಬ್ರಹ್ಮಣ್ಯದ ಮೋಹನದಾಸ ರೈ 12,50,001.00 ಹಣ ಪಾವತಿಸಿ ರಥ ನಿರ್ಮಿಸಲು ವೀಳ್ಯವನ್ನು ನೀಡಿದರು. ಇನ್ನು ಮೇ.2 ನೇ ವಾರದಲ್ಲಿ ರಥದ ಕೆಲಸ ಪೂರ್ಣವಾಗಲಿದ್ದು ಇದು 16 ಅಡಿ ಎತ್ತರ ಇರಲಿದೆ ಎಂದು ತಿಳಿದು ಬಂದಿದೆ. ಶ್ರೀನಿವಾಸ್ ಅವರು ಅನ್ನದಾನಕ್ಕೂ 2 ಲಕ್ಷ ಹಣವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!