Thursday, June 4, 2026
Homeಕರಾವಳಿಮಂಗಳೂರು: ನೇಪಾಳ ಮೂಲದ ಮಹಿಳೆ ನಾಪತ್ತೆ

ಮಂಗಳೂರು: ನೇಪಾಳ ಮೂಲದ ಮಹಿಳೆ ನಾಪತ್ತೆ

- Advertisement -
- Advertisement -

ಮಂಗಳೂರು: ನಗರದಲ್ಲಿ ಮೂರು ವರ್ಷಗಳಿಂದ ವಾಸವಿರುವ ನೇಪಾಳ ಮೂಲದ ಮಹಿಳೆ ನಾಪತ್ತೆಯಾದ ಬಗ್ಗೆ ಆಕೆಯ ಪತಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನೇಪಾಳ ಮೂಲದ ಸೀತಾ ಬೋಹರಾ ನಾಪತ್ತೆಯಾದ ಮಹಿಳೆ.

ನಗರದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಉಮೇಶ್ ಬೋಹರಾ, ಪತ್ನಿ ಹಾಗೂ ಮಗನೊಂದಿಗೆ ನಗರದಲ್ಲೇ ವಾಸವಿದ್ದರು. ಆದರೆ ಸೆ.27ರಂದು ಮಧ್ಯಾಹ್ನದಂದು ಪತ್ನಿ ಬೇರೆಯವರ ಮನೆಗೆ ಮನೆ ಕೆಲಸಕ್ಕೆ ಹೋಗಿ ಬರುವುದಾಗಿ ಹೋದವರು ಹಿಂದಿರುಗಿ ಬಂದಿಲ್ಲ. ಆಕೆ ಕೆಲಸ ಮಾಡುವ ಮನೆಗಳಲ್ಲಿ ವಿಚಾರಿಸಿದಾಗಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!