Thursday, June 4, 2026
HomeUncategorizedಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೆ ಪೂರೈಕೆಯಾಗಲಿದೆ ಡೀಸೆಲ್...!

ಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೆ ಪೂರೈಕೆಯಾಗಲಿದೆ ಡೀಸೆಲ್…!

- Advertisement -
- Advertisement -

ಮಂಗಳೂರು: ಎಂಆರ್‌ಪಿಎಲ್‌ ತನ್ನ ಡೀಸೆಲ್‌ ಅನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಬಹುದಾದ ಸೌಕರ್ಯಕ್ಕಾಗಿ ಸ್ಟಾರ್ಟಪ್‌ ಕಂಪೆನಿ ಪೆಪ್‌ ಫ್ಯೂಯಲ್ಸ್‌ ಜತೆ ಗುರುವಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಈ ಸಂಸ್ಥೆ ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆಯಲ್ಲಿ ನೋಂದಣಿಗೊಂಡಿದೆ. ಒಪ್ಪಂದದ ಪ್ರಕಾರ ಡೀಸೆಲ್‌ ಅನ್ನು ಎಂಆರ್‌ಪಿಎಲ್‌ನಿಂದ ಪಡೆದು ಗ್ರಾಹಕರ ಮನೆ ಬಾಗಿಲಿಗೆ ತಮ್ಮ ವಾಹನಗಳ ಮೂಲಕ ಅವರು ತಲುಪಿಸಲಿದ್ದಾರೆ.

ಪೆಪ್‌ ಫ್ಯೂಯಲ್‌ ಆನ್‌ಲೈನ್‌ ವೇದಿಕೆಯ ಮೂಲಕವೂ ಗ್ರಾಹಕರು ಡೀಸೆಲ್‌ ಖರೀದಿ ಮಾಡಬಹುದಾಗಿದೆ. ಎಂಆರ್‌ಪಿಎಲ್‌ನ ಮಾರ್ಕೆಟಿಂಗ್‌ ಜಿಜಿಎಂ ಸತ್ಯನಾರಾಯಣ ಎಚ್‌.ಸಿ. ಹಾಗೂ ಪೆಪ್‌ ಕಂಪೆನಿಯ ನಿರ್ದೇಶಕ ಟೀಕೇಂದ್ರ ಕುಮಾರ್‌ ಒಪ್ಪಂದಕ್ಕೆ ಸಹಿ ಹಾಕಿದರು

- Advertisement -

Latest News

error: Content is protected !!