Thursday, June 4, 2026
Homeಕೊಡಗುಮಡಿಕೇರಿ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಎನ್ ಸಿ  ಸಿ ಅಧಿಕಾರಿ ಸಾವು

ಮಡಿಕೇರಿ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಎನ್ ಸಿ  ಸಿ ಅಧಿಕಾರಿ ಸಾವು

- Advertisement -
- Advertisement -

ಮಡಿಕೇರಿ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಎನ್ ಸಿ  ಸಿ ಅಧಿಕಾರಿ ಸಾವನ್ನಪ್ಪಿರುವ ಘಟನೆ‌ ವಿರಾಜಪೇಟೆಯಲ್ಲಿ ನಡೆದಿದೆ.ವಿರಾಜಪೇಟೆಯ  ಬಲ್ಯಂಡ ಡಾ. ಎಸ್.ಎನ್ ಬೀನಾ (52) ಮೃತ ದುರ್ದೈವಿ.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಎನ್ ಸಿ ಸಿ  ಅಧಿಕಾರಿಯಾಗಿದ್ದ ಡಾ. ಎಸ್.ಎನ್ ಬೀನಾ, ಈ  ಹಿಂದೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವಿರಾಜಪೇಟೆಯ ಕಡಂಗದ ಮರೂರು ಗ್ರಾಮದ ನಿವಾಸಿ ಡಾ.ಎಸ್.ಎನ್.ಬೀನಾ.ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ.
ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಬೀನಾ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!