Friday, June 5, 2026
Homeಕರಾವಳಿಬಂಟ್ವಾಳ; ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕ ಆತ್ಮಹತ್ಯೆ

ಬಂಟ್ವಾಳ; ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ; ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ವಿಠ್ಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್(32) ಮೃತ ದುರ್ದೈವಿ.

ಇವರು ಕೆಮ್ಮಿಂಜೆ ನಿವಾಸಿಯಾಗಿದ್ದು, ಪುತ್ತೂರು ಕೋರ್ಟ್ ರೋಡ್ ನಲ್ಲಿ ಜಿನಸಿ ಅಂಗಡಿಯನ್ನು ಕಳೆದ ಹಲವು‌ ವರ್ಷಗಳಿಂದ ನಡೆಸುತ್ತಿದ್ದರು ಎನ್ನಲಾಗಿದೆ. ವಿಘ್ನೇಶ್ ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ನೇತ್ರಾವತಿ ನದಿ ಬಳಿ ಸಂಶಯಾಸ್ಪದ ನೆಲೆಯಲ್ಲಿ ವಾಹನ‌ ಕಂಡ ಹಿನ್ನೆಲೆ ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!