Wednesday, June 3, 2026
Homeತಾಜಾ ಸುದ್ದಿಇಂದಿನಿಂದ ಶಾಲಾರಂಭ ಹಿನ್ನೆಲೆ: ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿದ ನಳೀನ್ ಕುಮಾರ್ ಕಟೀಲು

ಇಂದಿನಿಂದ ಶಾಲಾರಂಭ ಹಿನ್ನೆಲೆ: ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿದ ನಳೀನ್ ಕುಮಾರ್ ಕಟೀಲು

- Advertisement -
- Advertisement -

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಶುಭಾಶಯ ಕೋರಿದ್ದಾರೆ.

ಕಲಿಕಾ ಚೇತರಿಕೆ ಮೂಲಕ ಶಾಲೆಗಳ ಆರಂಭವನ್ನು ಸಂಭ್ರಮದಿಂದ ಸ್ವಾಗತಿಸಬೇಕಿದೆ ಎಂದು ನಳೀನ್ ಕುಮಾರ್ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ

ಮಕ್ಕಳು ಇತರ ಮಕ್ಕಳ ಜೊತೆ ಸೇರಿ ಕಲಿಯುವುದು, ಶಾಲಾ ಪರಿಸರದಲ್ಲಿ ಆಟವಾಡುವುದು, ಬರೆಯುವುದು, ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಅವರ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಆಗಲಿದೆ ಎಂದು ಕಟೀಲು ಹೇಳಿದ್ದಾರೆ.

ಅಲ್ಲದೇ ಶಿಕ್ಷಕರು, ಪೋಷಕರು ಮತ್ತು ಸಮಾಜವು ಶಾಲೆಗಳ ಆರಂಭಕ್ಕೆ ತುಂಬು ಹೃದಯದ ಬೆಂಬಲ ನೀಡಬೇಕಿದೆ ಎಂದು ನಳೀನ್ ಕುಮಾರ್ ಕಟೀಲು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!