Wednesday, June 24, 2026
Homeಕರಾವಳಿಪ್ರತಿ ದಿನ 3.5 ಲೀಟರ್ ಹಾಲು ನೀಡುತ್ತಿರುವ ಕರುವಿಗೆ ಜನ್ಮ ನೀಡದ ಆಕಳು

ಪ್ರತಿ ದಿನ 3.5 ಲೀಟರ್ ಹಾಲು ನೀಡುತ್ತಿರುವ ಕರುವಿಗೆ ಜನ್ಮ ನೀಡದ ಆಕಳು

- Advertisement -
- Advertisement -

ಕೇರಳ: ಕರುವಿಗೆ ಜನ್ಮ ನೀಡದ ಆಕಳು ಪ್ರತಿ ನಿತ್ಯ 3.5 ಲೀಟರ್ ಹಾಲು ನೀಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ಕೇರಳದ ಕಣ್ಣೂರಿನ ಕಂಗೋಳ ಗ್ರಾಮದಲ್ಲಿ ನಡೆದಿದೆ.

ಕಂಗೋಳ ನಿವಾಸಿಯಾಗಿರುವ ಸಜೇಶ್ ಎಂಬವರು 2021 ರಲ್ಲಿ ಕರು ಮತ್ತು ಹಸುವನ್ನು ಖರೀದಿ ಮಾಡಿದ್ದರು. ನಂತರ ಹಸುವಿಗೆ ರೋಗ ಕಾಣಿಸಿಕೊಂಡ ಕಾರಣ ಹಸುವನ್ನು ಮಾರಾಟ ಮಾಡಿದ್ದರು.

ಅನಂತರ 11 ತಿಂಗಳ ಕರುವಿನ ಕೆಚ್ಚಲು ಊದಿಕೊಂಡಿದ್ದನ್ನು ಗಮನಿಸಿ ಹಾಲು ಕರೆದ ವೇಳೆ ತೆಳ್ಳಗಿನ ಹಾಲು ನೀಡಿತ್ತು. ನಂತರ ಹಾಲಿನ ಗುಣಮಟ್ಟ ಸುಧಾರಿಸಿದ್ದು, ಇದೀಗ 3.5 ಲೀಟರ್ ಹಾಲು ನೀಡಲಾರಂಭಿಸಿದೆ.

ಹಾಲಿನ ಸೊಸೈಟಿಯಿಂದ ಹಾಲಿನ ಗುಣಮಟ್ಟ ಪರಿಶೀಲನೆ ಮಾಡಲಾಗಿದ್ದು, ಹಾರ್ಮೋನ್ ಬದಲಾವಣೆಯಿಂದ ಈ ರೀತಿ ಆಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!