Wednesday, June 24, 2026
Homeಪ್ರಮುಖ-ಸುದ್ದಿಇಂದಿನಿಂದ ಶಾಲೆಗಳು ಆರಂಭ: ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಲು ಶಿಕ್ಷಣ ಸಚಿವರ ಸೂಚನೆ

ಇಂದಿನಿಂದ ಶಾಲೆಗಳು ಆರಂಭ: ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಲು ಶಿಕ್ಷಣ ಸಚಿವರ ಸೂಚನೆ

- Advertisement -
- Advertisement -

ಬೆಂಗಳೂರು ಇಂದಿನಿಂದ ಶಾಲೆಗಳು ಆರಂಭವಾಗುತ್ತಿದ್ದು, ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಬೇಕು ಎಂದು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಹೇಳಿದ್ದಾರೆ.

ಮಕ್ಕಳು ಶಾಲೆಗೆ ಬರುವುದು ಸಂಭ್ರಮದ ಕ್ಷಣ. ಮೊದಲ ಸಲವಂತು ಶಾಲೆಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆ ದೇವಸ್ಥಾನ. ವಿದ್ಯಾಮಂದಿರಕ್ಕೆ ಕಾಲಿಡುವಾಗ ಸುಂದರವಾದ ಪರಿಸರ ನಿರ್ಮಾಣವಾಗಬೇಕು. ಮಕ್ಕಳು ಶಾಲೆಗೆ ಬರುವಾಗ ಸಂತೋಷದಿಂದ ಬರಬೇಕು. ಸಿಹಿಖಾದ್ಯಗಳನ್ನು ಮಾಡಿ ಮಕ್ಕಳಿಗೆ ವಿತರಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಶ್ರಮದಾನ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ದಿಯ ಜೊತೆ ಮಕ್ಕಳನ್ನು ಶಾಲೆಗೆ ಖುಷಿಯಂದ ಬರುವಂತೆ ನೋಡಿಕೊಳ್ಳುವ ಸಲುವಾಗಿ ಇಲಾಖೆ ಸಿಹಿ ವಿತರಣೆಯನ್ನು ಮಾಡುತ್ತಿದೆ.

.

- Advertisement -

Latest News

error: Content is protected !!