Monday, June 15, 2026
Homeತಾಜಾ ಸುದ್ದಿಉಳ್ಳಾಲ: ವಿವಾಹಿತೆ ನಿಗೂಢ ಸಾವು: ಪತಿ ಪೊಲೀಸ್‌ ವಶ: ಅನಾಥವಾಯ್ತು ಎಂಟು ತಿಂಗಳ ಹೆಣ್ಣು ಮಗು

ಉಳ್ಳಾಲ: ವಿವಾಹಿತೆ ನಿಗೂಢ ಸಾವು: ಪತಿ ಪೊಲೀಸ್‌ ವಶ: ಅನಾಥವಾಯ್ತು ಎಂಟು ತಿಂಗಳ ಹೆಣ್ಣು ಮಗು

- Advertisement -
- Advertisement -

ಉಳ್ಳಾಲ: ವಿವಾಹಿತೆಯೋರ್ವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲತ್ ನಗರ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಮಿಲ್ಲತ್ ನಗರ ನಿವಾಸಿ ಜಂಶೀರಾ(25) ಮೃತ ದುರ್ದೈವಿ. ಈಕೆಯ ಪತಿ ಇರ್ಫಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪತಿ ಪ್ರಕಾರ ನಿನ್ನೆ ರಾತ್ರಿ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಆನಂತರ ಜಂಶೀರಾ ಕೋಣೆಯೊಳಕ್ಕೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಪತಿ ಇರ್ಫಾನನಿಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಆಕೆಯನ್ನು ಮೇಲಿಂದ ಇಳಿಸಿ ಆಸ್ಪತ್ರೆ ಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿರುವುದಾಗಿ‌ ವೈದ್ಯರು ತಿಳಿಸುತ್ತಿದ್ದಂತೆ ಮತ್ತೆ ಮೃತದೇಹವನ್ನು ವಾಪಸ್ಸು ಮನೆಗೆ ತಂದಿದ್ದಾನೆ. ಆನಂತರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದಾನೆ.

ಸ್ಥಳೀಯರ ಪ್ರಕಾರ ಮೃತದೇಹದಲ್ಲಿ ರಕ್ತದ ಕಲೆಗಳು ಇದ್ದು, ಇದೊಂದು ಕೊಲೆ ಅನ್ನುವ ಸಂಶಯ ವ್ಯಕ್ತಪಡಿಸಿದ್ದು, ಮನೆಮುಂದೆ 500 ಕ್ಕೂ ಅಧಿಕ ಆಕ್ರೋಶಿತರು ಜಮಾಯಿಸಿ  ಇರ್ಫಾನ್ ವಿರುದ್ಧ ಕ್ರಮಕ್ಕೆ  ಆಗ್ರಹಿಸಿದ್ದಾರೆ. ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಇರ್ಫಾನ್ ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇರ್ಫಾನ್ ಬೈಕಂಪಾಡಿಯ ಫಿಶ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು, ಎರಡು ವರ್ಷದ ಹಿಂದೆಯಷ್ಟೇ ಜಂಶೀರಾ ಜೊತೆ ವಿವಾಹವಾಗಿದ್ದನು. ದಂಪತಿಗೆ ಎಂಟು ತಿಂಗಳ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ

- Advertisement -

Latest News

error: Content is protected !!