Sunday, February 16, 2025
Homeಕರಾವಳಿಉಡುಪಿಉಡುಪಿ: ಹಲವರು ವರ್ಷಗಳಿಂದ ತಮ್ಮ ಮನೆಯಲ್ಲಿದ್ದ ವೃದ್ಧೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಂ ಕುಟುಂಬ:...

ಉಡುಪಿ: ಹಲವರು ವರ್ಷಗಳಿಂದ ತಮ್ಮ ಮನೆಯಲ್ಲಿದ್ದ ವೃದ್ಧೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಂ ಕುಟುಂಬ: ಸುಂದರ ಬಾಂಧವ್ಯಕ್ಕೆ ಅಡ್ಡ ಬಾರದ ಧರ್ಮ

spot_img
- Advertisement -
- Advertisement -

ಉಡುಪಿ: ಹಲವರು ವರ್ಷಗಳಿಂದ ತಮ್ಮ ಮನೆಯಲ್ಲಿದ್ದ ವೃದ್ಧೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಕುಟುಂಬ ವೊಂದು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಕೋಮು ಸೌಹರ್ದತೆ ಮೆರೆದ ಘಟನೆ ಉಡುಪಿಯಲ್ಲಿ ನಡೆದದೆ.

ಉದ್ಯಾವರ ಮೂಲದ ಜಾನಕಿ ಪೂಜಾರಿ ಅವರು ರಫೀಕ್ ಮನೆಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು. ಜಾನಕಿ ಅವರ ಪತಿ ಹಾಗೂ ಅವರನ್ನು ನೋಡಿಕೊಳ್ಳುತ್ತಿದ್ದ ರಫೀಕ್ ಅವರ ತಂದೆ ಗೆಳೆಯರಾಗಿದ್ದರು. ಮಗ ಇದ್ದರೂ ಪತಿಯ ಅಗಲಿಕೆಯ ನಂತರ ಜಾನಕಿ ಅವರು ರಫೀಕ್ ತಾಯಿ ಜೊತೆ ಮುಂಬೈನಲ್ಲಿ ಅಡುಗೆ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಬಳಿಕ ರಫಿಕ್ ಅವರ ಕುಟುಂಬ ಮುಂಬೈ ಬಿಟ್ಟು ಉಡುಪಿಗೆ ಆಗಮಿಸಿದರೂ ಕೂಡ ಜಾನಕಿ ಅವರೊಂದಿಗೆ ಇದ್ದರು. 10 ವರ್ಷಗಳ ಹಿಂದೆ ಮಲ್ಲಾರು ಗರಡಿ ವಾರ್ಡ್‌ನಲ್ಲಿ ಮನೆ ಖರೀದಿಸಿದ ಬಳಿಕವೂ ನಮ್ಮ ಮನೆಯಲ್ಲಿ ಇರಲು ನಿರ್ಧರಿಸಿದ್ದರು.

ಬಾಲ್ಯದಲ್ಲಿ ಮಗನಂತೆ ಸಲುಹಿದ ಜಾನಕಿ ಅವರನ್ನು ರಫೀಕ್ ಅವರ ಕುಟುಂಬ ಅವರ ಕೊನೆಯ ದಿನದಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ಜಾನಕಿ 90ನೇ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟಿದ್ದು, ಅವರ ಅಂತಿಮ ದರ್ಶನಕ್ಕೆ ಪುತ್ರ ಮತ್ತು ಮೊಮ್ಮಗಳು ಬಂದಿದ್ದರು. ರಫೀಕ್ ಮತ್ತು ಸಹೋದರ ಅಬ್ದುಲ್ ಖಾದರ್ ಇಚ್ಛೆಯಂತೆ ಹಿಂದೂ ಸಂಪ್ರದಾಯದ ಪ್ರಕಾರ ಅಂತಿಮ ವಿಧಿಗಳನ್ನು ಪೂರೈಸಿ ಕಾಪು ರುದ್ರಭೂಮಿಯಲ್ಲಿ ಸೂರಿ ಶೆಟ್ಟಿ ನೇತೃತ್ವ ಮತ್ತು ರಮೇಶ್ ಪೂಜಾರಿ ಮಲ್ಲಾರು ಮುಂದಾಳತ್ವದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಪುತ್ರ ಶೇಖರ ವಿಠಲ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆ ಮೂಲಕ ಸುಂದರ ಬಾಂಧವ್ಯಕ್ಕೆ ಧರ್ಮ ಅಡ್ಡಿ ಬರಲ್ಲ ಅನ್ನೋದನ್ನು ರಫೀಕ್ ಕುಟುಂಬ ನಿರೂಪಿಸಿದೆ.

- Advertisement -
spot_img

Latest News

error: Content is protected !!