Saturday, June 13, 2026
Homeಕರಾವಳಿಬಂಟ್ವಾಳ : ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ:ಆರೋಪಿಯನ್ನು ಬಂಧಿಸಿದ ಬಂಟ್ವಾಳ ನಗರ ಪೊಲೀಸರು

ಬಂಟ್ವಾಳ : ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ:ಆರೋಪಿಯನ್ನು ಬಂಧಿಸಿದ ಬಂಟ್ವಾಳ ನಗರ ಪೊಲೀಸರು

- Advertisement -
- Advertisement -

ಬಂಟ್ವಾಳ: ಪಾಣೆಮಂಗಳೂರು ಜೈನರಪೇಟೆ ನಿವಾಸಿ ಸುಲೈಮಾನ್ ಎಂಬಾತನಿಗೆ ಫೆ. 18 ರಂದು ಕತ್ತರಿಯಿಂದ ಇರಿದು ಕೊಲೆಗೆ ಪ್ರಯತ್ನಿಸಿದ್ದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಿ ಬಂಟ್ವಾಳ ನಗರ ಪೊಲೀಸರು ಜೈಲಿಗಟ್ಟಿದ್ದಾರೆ.

ಮಾ.21 ರಂದು ಬಂಟ್ವಾಳದ ನರಿಕೊಂಬು ಗ್ರಾಮದ ಪಿತ್ತಲಗುಡ್ಡೆ ನಿವಾಸಿ ಆರೋಪಿ ನಿಸಾರ್ ಯಾನೆ ನಿಸಾರ್ ಆಹಮ್ಮದ್ ಬಂಧಿಸಿದ್ದಾರೆ. ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಹೊರಬಂದಿದ್ದ ಈತ ಜೈಲಿನಿಂದ ಹೊರ ಬಂದ ಕೆಲ ದಿನಗಳಲ್ಲಿ ಮತ್ತೆ ಪರಿಚಯಸ್ಥನಿಗೆ ಕ್ಷುಲ್ಲಕ ಕಾರಣಕ್ಕಾಗಿ ಕತ್ತರಿಯಿಂದ ಇರಿದು ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ ನಗರ ಪೋಲೀಸ್ ಠಾಣಾ  ಇನ್ಸ್ ಪೆಕ್ಟರ್ ವಿವೇಕಾನಂದ ಮತ್ತು   ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ನೇತೃತ್ವದ ತಂಡದ ಕ್ರೈಮ್ ಸಿಬ್ಬಂದಿ ಇರ್ಷಾದ್ ,ರಾಜೇಶ್, ಪ್ರವೀಣ್, ಕಾರ್ಯಾಚರಣೆ  ಭಾಗವಹಿಸಿದರು.

- Advertisement -

Latest News

error: Content is protected !!