Saturday, August 29, 2026
Homeಕರಾವಳಿಮಂಗಳೂರು: ಹಂಪ್‌ನಲ್ಲಿ ಬಸ್‌ ಮೇಲಕ್ಕೆ ಹಾರಿ ಬಿದ್ದ ಪರಿಣಾಮ ವ್ಯಕ್ತಿಗೆ ಗಂಭೀರ ಗಾಯ

ಮಂಗಳೂರು: ಹಂಪ್‌ನಲ್ಲಿ ಬಸ್‌ ಮೇಲಕ್ಕೆ ಹಾರಿ ಬಿದ್ದ ಪರಿಣಾಮ ವ್ಯಕ್ತಿಗೆ ಗಂಭೀರ ಗಾಯ

- Advertisement -
- Advertisement -

ಮಂಗಳೂರು: ಹಂಪ್‌ನಲ್ಲಿ ಬಸ್‌ ಮೇಲಕ್ಕೆ ಹಾರಿ ಬಿದ್ದ ಪರಿಣಾಮ ಬಸ್‌ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ವಾಮಂಜೂರು ಸಮೀಪ ನಡೆದಿದೆ. ಪ್ರದೀಶ್‌ (50) ಗಂಭೀರವಾಗಿ ಗಾಯಗೊಂಡ ವ್ಯಕ್ತಿ.

ಪ್ರದೀಶ್ ಬಿ.ಸಿ.ರೋಡ್‌ ಕಡೆಗೆ ಹೋಗಲು ಮೂಡುಶೆಡ್ಡೆಯಿಂದ ಮಂಗಳೂರು ಕಡೆಗೆ ಹೋಗುವ ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದರು.

ಬಸ್‌ ಬೆಳಗ್ಗೆ 9.15ಕ್ಕೆ ವಾಮಂಜೂರಿನ ಆರ್‌ಟಿಒ ಸ್ಟಾಪ್‌ ಬಳಿ ಬಂದಾಗ ಚಾಲಕ ಹಂಪ್‌ ಮೇಲೆ ಹಾರಿಸಿಕೊಂಡು ಹೋದ ಪರಿಣಾಮ ಪ್ರದೀಶ್‌ ಅವರು ಬಸ್ಸಿನೊಳಗೆ ಬಿದ್ದು ಅವರಿಗೆ ಕಬ್ಬಿಣದ ರಾಡ್‌ ತಾಗಿದೆ. ಪರಿಣಾಮ ಗಂಭೀರ ಗಾಯವಾಗಿದೆ. ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!