Thursday, June 4, 2026
Homeಅಪರಾಧಡಿಕೆ ಬ್ರದರ್ಸ್‌ ವಿರುದ್ಧ ಮುನಿರತ್ನ ಆರೋಪ; ಕುಸುಮಾರನ್ನು ಶಾಸಕಿ ಮಾಡುವ ನಿಟ್ಟಿನಲ್ಲಿ ನನ್ನ ಕೊಲೆಗೆ ಯತ್ನ

ಡಿಕೆ ಬ್ರದರ್ಸ್‌ ವಿರುದ್ಧ ಮುನಿರತ್ನ ಆರೋಪ; ಕುಸುಮಾರನ್ನು ಶಾಸಕಿ ಮಾಡುವ ನಿಟ್ಟಿನಲ್ಲಿ ನನ್ನ ಕೊಲೆಗೆ ಯತ್ನ

- Advertisement -
- Advertisement -

ಬೆಂಗಳೂರು: ಡಿಕೆ ಸುರೇಶ್‌, ಡಿಕೆ ಶಿವಕುಮಾರ್‌ ಇಬ್ಬರು ಸೇರಿ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಸಲುವಾಗಿ ನನ್ನ ಮೇಲೆ ಆಸೀಡ್‌ ದಾಳಿ ನಡೆಸಿದ್ದಾರೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಮುನಿರತ್ನ ಅವರು ವಾಜಪೇಯಿಯವರ 100 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಲಕ್ಷ್ಮಿದೇವಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುನಿರತ್ನ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳುತ್ತಿದ್ದಾಗ ಅವರ ಮೇಲೆ ಕಲ್ಲು ಮತ್ತು ಮೊಟ್ಟೆ ದಾಳಿ ನಡೆದಿದ್ದು, ಮೊಟ್ಟೆಯೊಳಗೆ ಆಸಿಡ್ ಹಾಕಿ ದಾಳಿ ಮಾಡಲಾಗಿದೆ. ಕಾರಿನ ಗಾಜಿನ ಮೇಲೆಯೇ ಕಲ್ಲು ಬಿದ್ದಿದೆ ಎನ್ನಲಾಗಿದೆ.

ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕೆಂದು ಡಿ.ಕೆ ಸುರೇಶ್ ಅವರಿಗೆ ಆಸೆಯಿದ್ದು, ಈ ನಿಟ್ಟಿನಲ್ಲಿ ನನ್ನ ಮೇಲೆ ದಾಳಿ ನಡೆದಿದೆ ಎಂದು ದೂರಿದರು.

- Advertisement -

Latest News

error: Content is protected !!