Friday, April 26, 2024
Homeತಾಜಾ ಸುದ್ದಿಮುಂಬೈ; ಬೋರಿವಲಿ ತುಳು ಸಂಘದ 12ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ

ಮುಂಬೈ; ಬೋರಿವಲಿ ತುಳು ಸಂಘದ 12ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ

spot_img
- Advertisement -
- Advertisement -

ಮುಂಬೈ :ಎಲ್ಲಾ ಸಮಾಜದ ತುಳು ಬಾಂಧವರನ್ನು ಒಂದೇ ವೇದಿಕೆಯಲ್ಲಿ ತರಲು ಹಾಗೂ ತುಳುವರ ಹಿತದೃಷ್ಟಿಯಿಂದ 2010 ರಲ್ಲಿ ನಮ್ಮವರಿಂದ ತುಳು ಸಂಘ ಬೋರಿವಲಿ ಸ್ಥಾಪನೆಯಾಗಿದೆ.  ತುಳು ಬಾಷೆ ಸಂಸ್ಕೃತಿಯನ್ನು ಉಳಿಸಲು  ಎಲ್ಲಾ ಸಮುದಾಯದ ತುಳು ಕನ್ನಡಿಗರ ಪ್ರತಿಭಾ ವಿಕಸನಕ್ಕೆ ತುಳು ಸಂಘ, ಬೋರಿವಲಿ, ವೇದಿಕೆಯಾಗಿದೆ  ಎಂದು ತುಳು ಸಂಘ, ಬೋರಿವಲಿಯ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿಯವರು ಹೇಳಿದರು.

ಮಾ. 25 ರಂದು ತುಳು ಸಂಘ, ಬೊರಿವಲಿಯ 12ನೇ  ವಾರ್ಷಿಕೋತ್ಸವ  ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, ಬೋರಿವಲಿ (ಪ.) ಮುಂಬಯಿ ಇಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸೇರಿದ ಜನ ಸಂದಣಿಯನ್ನುಉದ್ದೇಶಿಸಿ ಮಾತನಾಡುತ್ತಾ ಇಂದು ತುಳುವರಲ್ಲಿ ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಉತ್ತಮ ಬದಲಾವಣೆಯಾಗಿದೆ. ಊರಿನಲ್ಲಿ ನಡೆಯುವ ಕೋಲದಂತಹ ಧಾರ್ಮಿಕ ಕಾರ್ಯಕ್ಕೆ ದೇಶ ವಿದೇಶಗಳಿಂದ ಯುವ ಜನಾಂಗವು ಆಗಮಿಸುತ್ತಿದ್ದು ಜನ ಕಿಕ್ಕಿರಿದು ಸೇರುತ್ತಿರುವುದು ಅಭಿನಂದನೀಯ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆಯಿತ್ತು ಮಾತನಾಡುತ್ತಾ ಸಮಾರಂಭದ ಗೌರವ ಅಥಿತಿ ಬಿಲ್ಲವರ ಅಸೋಷಿಯೇಶನ್, ಮುಂಬಯಿಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಮಾತನಾಡುತ್ತಾ ತುಳು ಸಂಘ ಬೋರಿವಲಿಯ ಗೌರವ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿಯವರ ಸಾಧನೆ ಶ್ಲಾಘನೀಯ. ಅವರ ನೇತೃತ್ವದಲ್ಲಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಎಂದರು.

ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆಯವರು ಮಾತನಾಡುತ್ತಾ ತುಳು ಸಂಘವನ್ನು ನಾವೆಲ್ಲರೂ ಪ್ರೀತಿಸೋಣ. ದೇವರಿಗೆ ಸಮಾನರಾದ ತಂದೆ ತಾಯಿಯಂದಿರುವ ಮನೆಯೇ ದೇವಸ್ಥಾನ. ಅನ್ನದಾನ ವಿದ್ಯಾದಾನ ಮಾಡುವ ಅವಕಾಶ ಸಿಕ್ಕಿದಲ್ಲಿ ಅದನ್ನು ಉಪಯೋಗಿಸಬೇಕು. 

ಗೌರವ ಅತಿಥಿಯಾಗಿ ಆಗಮಿಸಿದ ತುಂಗಾ ಹಾಷ್ಪಿಟಲ್ ನ ಸಿ.ಎಂ.ಡಿ. ಡಾ. ಸತೀಷ್ ಬಿ. ಶೆಟ್ಟಿ, ಯವರು ಮಾತನಾಡುತ್ತಾ ಆಸ್ಫತ್ರೆಗೆ ನಮ್ಮ ಅಮ್ಮನ ಹೆಸರನ್ನು ಇಡಲಾಗಿದ್ದು ಅವರು ತುಳು ಸಂಘದ ಮೇಲಿನ ಪ್ರೀತಿಯಿಂದ ಅವರು ಇಲ್ಲಿ ಉಪಸ್ಥಿತರಿದ್ದಾರೆ. ತುಳು ಬಾಷೆಯ ನಮ್ಮ ಅಭಿಮಾನವು ಮನೆಯಿಂದಲೇ ಆರಂಭಗೊಳ್ಳಬೇಕು ಎನ್ನುತ್ತಾ ಆರೋಗ್ಯ ವೃದ್ದಿಯ ಬಗ್ಗೆ  ಮಾಹಿತಿಯನ್ನು ನೀಡಿದರು.

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಕಲಾ ಎಸ್. ಪೂಂಜಾ ಅವರು ಮಾತನಾಡುತ್ತಾ ಈ ಪರಿಸರದ ತುಳುವರು ನನ್ನ ಬಂಧುಗಳು. ನಾವು ಎಷ್ಟು ಮಾತನಾಡಿದರೂ ನಮ್ಮನ್ನು ಇನ್ನೂ ಮಾತನಾಡಿಸುವ ಸುಂದರವಾದ ಭಾಷೆ ನಮ್ಮ ಮಾತೃ ಬಾಷೆ ಅದು ತುಳು. ನಾವೂ ಎಲ್ಲಿ ಹೋದರೂ ಅಲ್ಲಿನ ತುಳುವರು ನಮ್ಮವರಾಗುತ್ತಾರೆ. ಎನ್ನುತ್ತಾ ತುಳು ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಸಮಾಜ ಸೇವಕಿ ಶಶಿಕಲಾ ಎ. ಮಾಡಾ ಇವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಿರಿಯ ಸಾಹಿತಿ ಚಂದ್ರಹಾಸ ಸುವರ್ಣ ಅವರು ಸನ್ಮಾನ ಪತ್ರವನ್ನು ವಾಚಿಸಿದರು.

ಆರಂಭದಲ್ಲಿ ತುಳು ಸಂಘ, ಬೋರಿವಲಿಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ಅತಿಥಿಗಳನ್ನು ಹಾಗೂ ಸೇರಿದ ಎಲ್ಲಾ ತುಳು ಅಭಿಮಾನಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಸಭಾಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಶೋಭಾ ಶೆಟ್ಟಿಯವರು ಪ್ರಾರ್ಥನೆಗೈದರು.

ಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್ ಅರ್. ಶೆಟ್ಟಿ ಶಿಮಂತೂರು, ನ್ಯಾ. ರಾಘವ ಎಂ., ಮತ್ತು ಸಚಿನ್ ಪೂಜಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಅಭಿನಯ ಮಂಟಪದ ಕಲಾವಿದರಿಂದ, ಕರುಣಾಕರ ಕೆ. ಕಾಪು ನಿರ್ದೇಶನದ “ಪಂಜುರ್ಲಿ”, ತುಳು ಜಾನಪದ ನಾಟಕ, ಸಂಘದ ಮಹಿಳಾ ಸದಸ್ಯರಿಂದ, ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ತುಳು ಸಂಘ, ಬೋರಿವಲಿ ಯ ಉಪಾಧ್ಯಕ್ಷರಾದ ಹರೀಶ್ ಮೈಂದನ್, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ,  ಜೊತೆ ಕಾರ್ಯದರ್ಶಿ ಈಶ್ವರ ಎಂ. ಐಲ್, ಜೊತೆ ಕೋಶಾಧಿಕಾರಿ ಸವಿತ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಉಪ ಕಾರ್ಯಾಧ್ಯಕ್ಷೆ ಶೋಭಾ ಎಸ್ ಶೆಟ್ಟಿ,  ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಕುಸುಮ ಬಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಕಸ್ತೂರಿ ಎಸ್. ಶೆಟ್ಟಿ, ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಸಂಘದ ಸಲಹೆಗಾರರಾದ  ಪ್ರದೀಪ್ ಶೆಟ್ಟಿ, ಬಾಬು ಶಿವ ಪೂಜಾರಿ, ಶ್ರೀನಿವಾಸ ಸಾಪಲ್ಯ,  ಪ್ರಕಾಶ್ ಶೆಟ್ಟಿ ಪೇಟೆಮನೆ ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಸುನಂದಾ ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಕೃಷ್ಣರಾಜ ಸುವರ್ಣ,  ಪ್ರಭಾಕರ್ ಶೆಟ್ಟಿ,  ದಿವಾಕರ ಕರ್ಕೇರ, ಯಶವಂತ್ ಪೂಜಾರಿ, ವಿಜಯ್ ಕುಮಾರ್ ಮುಲ್ಕಿ, ಟಿ ವಿ ಪೂಜಾರಿ, ಅಶೋಕ್ ಪೂಜಾರಿ ಮಹಿಳಾ ವಿಭಾಗದ ಸದಸ್ಯರಾದ ರಾಜೇಶ್ವರಿ ಸುವರ್ಣ, ಸರಸ್ವತಿ ರಾವ್, ಸುಮತಿ ಸಾಲಿಯಾನ್, ಸುನಂದ ಶೆಟ್ಟಿ, ಪೂರ್ಣಿಮಾ ಪೂಜಾರಿ, ವೇದ ಶೆಟ್ಟಿ, ಸುನಿತಾ ಶೆಟ್ಟಿ, ಉಷಾ ಶೆಟ್ಟಿ, ಹರಿಣಿ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ ಧನ್ಯವಾದ ಸಮರ್ಪಿಸಿದರು.

- Advertisement -
spot_img

Latest News

error: Content is protected !!