Friday, June 5, 2026
Homeಕರಾವಳಿಮಂಗಳೂರು; ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಮಂಗಳೂರು; ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನಪ್ಪಿದ ಘಟನೆ ಹರೇಕಳದಲ್ಲಿ ನಡೆದಿದೆ.ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಮೃತ ದುರ್ದೈವಿ.

ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗೆ ಕರೆದಿದ್ದರು. ಸುಮಾರು 20 ರಷ್ಟು ನೆಂಟರು, ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು ಪಾಲವಾಗಿ ಅಡ್ಡವಾಗಿ ಹಾಕಿದ್ದರು. ಅದರಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ನದಿ ನೀರಿನ ಹೂಳಿನಲ್ಲಿ ಹೂತು ಹೋಗಿದ್ದರು. ಈಜಲು ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!