Friday, June 5, 2026
Homeತಾಜಾ ಸುದ್ದಿಅಬಕಾರಿ ಖಾತೆಯಲ್ಲಿ ನಾನು ಮಾಡುವಂಥದ್ದು ಏನೂ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ

ಅಬಕಾರಿ ಖಾತೆಯಲ್ಲಿ ನಾನು ಮಾಡುವಂಥದ್ದು ಏನೂ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ ನಂತ್ರ, ಇದೀಗ ಬಹಿರಂಗವಾಗಿಯೇ ಸಚಿವರ ಅಸಮಾಧಾನ ಸ್ಪೋಟಗೊಂಡಿದೆ. ವಸತಿ ಖಾತೆ ಕೈತಪ್ಪಿದ್ದಕ್ಕೆ ಸಚಿವ ಎಂಟಿಬಿ ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ನೀಡಿರುವ ಅಬಕಾರಿ ಖಾತೆ ಬೇಡ ಎಂದು ಹೇಳಿದ್ದಾರೆ.

ನೂತನ ಸಚಿವ ಎಂಟಿಬಿ ನಾಗರಾಜ್, ಅಬಕಾರಿ ಸಚಿನಾಗಿ ಮಾಡೋ ಕೆಲಸ ಏನಿದೆ.? ನಾನು ಸಿಎಂ ಯಡಿಯೂರಪ್ಪಗೆ ಅಬಕಾರಿ ಇಲಾಖೆ ಬೇಡ ಎಂದು ಹೇಳಿದ್ದೇನೆ ಎಂಬುದಾಗಿ ಹೇಳುವ ಮೂಲಕ, ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಅಬಕಾರಿ ಖಾತೆಯಲ್ಲಿ ನಾನು ಮಾಡುವಂಥದ್ದು ಏನೂ ಇಲ್ಲ. ನಾನು ಈ ಹಿಂದೆ ವಸತಿ ಸಚಿವನಾಗಿದ್ದೆ. ಸಾರ್ವಜನಿಕರಿಗೆ ಒಳ್ಳೆಯದಾಗುವ, ಬಡವರಿಗೆ ಸಹಾಯ ಮಾಡುವಂತಹ ಖಾತೆ ನಾನು ಕೇಳಿದ್ದೆ. ವಸತಿ ಖಾತೆಯಲ್ಲಾದರೆ ಮನೆ ಕೊಡುವ, ಕಾಮಗಾರಿ ಮಾಡಿಸಿಕೊಡುವ ಕೆಲಸವಿರುತ್ತದೆ. ಅಬಕಾರಿ ಖಾತೆ ಪಡೆದು ನಾನು ಏನೂ ಮಾಡಲು ಸಾಧ್ಯವಿಲ್ಲ. ಸಂಜೆ ಮತ್ತೆ ಸಿಎಂ ಭೇಟಿಯಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!