Friday, June 5, 2026
Homeತಾಜಾ ಸುದ್ದಿಕೊರೊನಾದಿಂದಾಗಿ ಪತ್ನಿಗೆ ಕಿಸ್ ಕೊಡಲು ಆಗಲಿಲ್ಲ: ನೋವು ತೋಡಿಕೊಂಡ ಮಾಜಿ ಮುಖ್ಯಮಂತ್ರಿ

ಕೊರೊನಾದಿಂದಾಗಿ ಪತ್ನಿಗೆ ಕಿಸ್ ಕೊಡಲು ಆಗಲಿಲ್ಲ: ನೋವು ತೋಡಿಕೊಂಡ ಮಾಜಿ ಮುಖ್ಯಮಂತ್ರಿ

- Advertisement -
- Advertisement -

ಶ್ರೀನಗರ: ಕೊರೊನಾದಿಂದಾಗಿ ಜನ ಏನೆಲ್ಲಾ ಕಷ್ಟ ಅನುಭವಿಸಿದ್ದಾರೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಅದರಲ್ಲೂ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿಯವರ ಸಂಕಟವೇ ಬೇರೆ.

ಹೌದು.. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಕೊರೊನಾದಿಂದಾಗಿ ಅವರು ತಮ್ಮ ಹೆಂಡತಿಗೆ ಮುತ್ತು ಕೊಡಲು ಆಗಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.

ಮಸೂದ್ ಅಹ್ಮದ್ ಚೌಧರಿ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಗುರ್ಜರ್ ದೇಶ್ ಚಾರಿಟಬಲ್ ಟ್ರಸ್ಟ್ ನಿಂದ ಬಿಡುಗಡೆ ಮಾಡಲಾಯಿತು. ಈ ಪುಸ್ತಕವನ್ನು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರೇ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯ ನಂತರ ಮಾತನಾಡಿದ ಅವರು, ಕೊರೊನಾ ಸಮಯದ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

35 ನಿಮಿಷದ ಭಾಷಣದಲ್ಲಿ ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಹಸ್ತಲಾಘವ ಮಾಡಲು ಮತ್ತು ಅಪ್ಪಿಕೊಳ್ಳಲಿ ಭಯಪಡುವಂತೆ ಆಯಿತು. ಏನೇ ಮಾಡಬೇಕೆಂದರು ಮೂರು ಬಾರಿ ಯೋಚನೆ ಮಾಡುವಂತೆ ಆಯಿತು. ಕೊರೊನಾ ಭಯದಿಂದ ನನ್ನ ಹೆಂಡತಿಗೆ ಮುತ್ತು ಕೊಡಲು ಆಗಲಿಲ್ಲ. ಮನಸ್ಸು ಬಯಸಿದರು ಅಪ್ಪಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!