Wednesday, June 24, 2026
Homeಕರಾವಳಿಎಂಆರ್‌ಪಿಎಲ್‌ನ ಭದ್ರತಾ ಸಿಬ್ಬಂದಿ ನಾಪತ್ತೆ; ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಎಂಆರ್‌ಪಿಎಲ್‌ನ ಭದ್ರತಾ ಸಿಬ್ಬಂದಿ ನಾಪತ್ತೆ; ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲು

- Advertisement -
- Advertisement -

ಮಂಗಳೂರು: ಇಲ್ಲಿನ ಎಂಆರ್‌ಪಿಎಲ್‌ನ ಭದ್ರತಾ ಸಿಬ್ಬಂದಿಯು ನಾಪತ್ತೆಯಾದ ಬಗ್ಗೆ ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಾಪತ್ತೆಯಾದ ವ್ಯಕ್ತಿ ‘ಸಮಾನ್ ಆಲಿ (24 ವರ್ಷ) ಎನ್ನಲಾಗಿದೆ.

ಪ್ರಕರಣದ ವಿವರ: ನಾಲಾ ಗೇಟ್‌ ಬಳಿಯಲ್ಲಿ ‘ಸಮಾನ್ ಆಲಿ (24 ವರ್ಷ) ಎಂಬಾತನನ್ನು ಇದೇ 17ರಂದು ರಾತ್ರಿ ಕರ್ತವ್ಯ ನಿಯೋಜಿಸಲಾಗಿತ್ತು. ಆತ ಇದೇ 18ರಂದು ಬೆಳಗಿನ ಜಾವ 5ಗಂಟೆಯಿಂದ ನಾಪತ್ತೆಯಾಗಿದ್ದಾನೆ. ಸುತ್ತ ಮುತ್ತ ಹುಡುಕಿದರೂ ಆತನ ಸುಳಿವು ಸಿಕ್ಕಿಲ್ಲ ಎಂದು ಎಂಆರ್‌ಪಿಎಲ್‌ ಏರೋಮ್ಯಾಟಿಕ್ಸ್‌ ಕಾಂಪ್ಲೆಕ್ಸ್‌ನ ಭದ್ರತಾ ವ್ಯವಸ್ಥಾಪಕ ಅನಿಲ್‌ ಕುಮಾರ್‌ ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ನಾಪತ್ತೆಯಾದ ಭದ್ರತಾ ಸಿಬ್ಬಂದಿಯ ಮೃತದೇಹ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಯ ಮೃತದೇಹ ಸಿಕ್ಕಿದ್ದನ್ನು ಪೊಲೀಸ್‌ ಮೂಲಗಳು ಇನ್ನೂ ಖಚಿತಪಡಿಸಿಲ್ಲ.

- Advertisement -

Latest News

error: Content is protected !!