Sunday, June 7, 2026
Homeಪ್ರಮುಖ-ಸುದ್ದಿಸಂಸದ ಉಮೇಶ್ ಜಾಧವ್ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು

ಸಂಸದ ಉಮೇಶ್ ಜಾಧವ್ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು

- Advertisement -
- Advertisement -

ಕಲಬುರ್ಗಿ : ಕಲಬುರ್ಗಿ ಸಂಸದ ಉಮೇಶ್ ಜಾಧವ್ ನಂತರ ಅವರ ಕುಟುಂಬದ 12 ಸದಸ್ಯರಿಗೆ ಕೊರೋನಾ ಸೋಂಕು ತಗುಲಿದೆ. ಉಮೇಶ್ ಜಾಧವ್ ಪತ್ನಿ, ಮಗಳು, ಸಹೋದರನ ಪುತ್ರಿ, ಮೊಮ್ಮಕ್ಕಳು, ಸೊಸೆಗೂ ಸೋಂಕು ಕಾಣಿಸಿಕೊಂಡಿದೆ. ಜಾಧವ್ ಪುತ್ರ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಆತನ ಪತ್ನಿ, ಜಾಧವ್ ಅಳಿಯನಿಗೂ ಸೋಂಕು ದೃಢಪಟ್ಟಿದೆ. ಅಲ್ಲದೆ ಉಮೇಶ್ ಜಾಧವ್ ಇಬ್ಬರು ಆಪ್ತ ಸಹಾಯಕರು, ಕಾರು ಚಾಲಕ ಹಾಗೂ ಅವಿನಾಶ್ ಜಾಧವ್ ಅವರ ಪಿಎ ಮತ್ತು ಕಾರು ಚಾಲಕನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ತಮ್ಮ ಕುಟುಂಬದ ಒಟ್ಟು 12 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ಸ್ವತಃ ಸಂಸದ ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.

ಸಂಸದರ ಜೊತೆಗೆ ಒಟ್ಟು ಇಪ್ಪತ್ತು ಜನರಿಗೆ ಸೋಂಕು ದೃಢಪಟ್ಟಿದೆ. ಐದು ದಿನಗಳ ಹಿಂದೆಯಷ್ಟೇ ಉಮೇಶ್ ಜಾಧವ್, ಅವಿನಾಶ್ ಜಾಧವ್ ಹಾಗೂ ಅಳಿಯ ಅರುಣ್ ಪವಾರ್ ಗೆ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಕುಟುಂಬದ 12 ಸದಸ್ಯರಿಗೆ, ಹಾಗೂ ಅವರ ಆಪ್ತರಿಗೆ ಸೋಂಕಿರೋದು ದೃಢಗೊಂಡಿದೆ. ಎಲ್ಲರನ್ನೂ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರ್ಗಿ ಸಂಸದ ಉಮೇಶ್ ಜಾಧವ್ ಹಾಗೂ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಮತ್ತು ಕುಟುಂಬದ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. ಉಮೇಶ್ ಜಾಧವ್ ಮತ್ತು ಕುಟುಂಬದ ಸದಸ್ಯರು ಕೊರೋನಾದಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳಿಂದ ಚಿಂಚೋಳಿ ಕ್ಷೇತ್ರದ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸಲಾಯಿತು.

- Advertisement -

Latest News

error: Content is protected !!