Sunday, June 7, 2026
Homeಕರಾವಳಿಸುಳ್ಯ: ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಸಿದ್ದ ಮಾಡುತ್ತಿರುವಾಗಲೇ ಎದ್ದು ಬಂದ 80ರ ವೃದ್ದೆ

ಸುಳ್ಯ: ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಸಿದ್ದ ಮಾಡುತ್ತಿರುವಾಗಲೇ ಎದ್ದು ಬಂದ 80ರ ವೃದ್ದೆ

- Advertisement -
- Advertisement -

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಒಂದು ಅಚ್ಚರಿ ನಡೆದಿದೆ. ಇನ್ನೇನು ಸತ್ತೆ ಹೋದರು ಎಂದು ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವಾಗ ವೃದ್ಧೆಯೊಬ್ಬರು ಫಿನಿಕ್ಸ್ ನಂತೆ ಎದ್ದು ಬಂದಿದ್ದಾರೆ.

ಸುಳ್ಯದ ಮರ್ಕಂಜ ಗ್ರಾಮದ ಪಟ್ಟೆಮನೆಯ ನಿವಾಸಿ ಹೇಮಾವತಿ ರೈ(80) ಕೋಮಾಕ್ಕೆ ಜಾರಿ ಸಾವಿನಂಚಿನಲ್ಲಿದ್ದು, ಅವರು ಬದುಕುವುದು ಕಷ್ಟವೆಂದು ಹೇಳಿದ್ದ ವೈದ್ಯರು ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ವೃದ್ಧೆಯ ಕುಟುಂಬದವರು, ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಸಾವಿನ ಕೊನೆಗಳಿಗೆಯಲ್ಲಿ ಹೇಮಾವತಿ ಚೇತರಿಸಿಕೊಂಡಿದ್ದಾರೆ.

ಹೇಮಾವತಿ ರೈಯವರಿಗೆ ಅನಾರೋಗ್ಯ ಕಂಡು ಬಂದತಕ್ಷಣ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡುತ್ತಿದ್ದಾಗಲೇ ಕೋಮಾಕ್ಕೆ ಜಾರಿದ್ದ ಅವರು ಕೃತಕ ಆಕ್ಸಿಜನ್ ಪೂರೈಕೆಯನ್ನು ತೆಗೆದರೆ ಬದುಕುವುದೇ ಕಷ್ಟ. ಅವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಕುಟುಂಬದವರಿಗೆ ತಿಳಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಮನೆಗೆ ಕರೆತರುವಾಗ ಅವರು ಚೇತರಿಸಿಕೊಂಡಿದ್ದು ಅವರಿಗೆ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

- Advertisement -

Latest News

error: Content is protected !!