Wednesday, June 24, 2026
Homeಉತ್ತರ ಕನ್ನಡಮೊಮ್ಮಗುವನ್ನು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ

ಮೊಮ್ಮಗುವನ್ನು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ

- Advertisement -
- Advertisement -

ಉತ್ತರಕನ್ನಡ: ಮೊಮ್ಮಗುವನ್ನು ನೋಡಲು ಆಸ್ಪತ್ರೆಗೆ ಬಂದ ಅತ್ತೆಗೆ ಅಳಿಯ ಆಸ್ಪತ್ರೆಯಲ್ಲೇ ಚಾಕುವಿನಿಂದ ಇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ದಾಂಡೇಲಿ ಮೂಲದ ರಮಜಾನ್ (25) ಎಂಬಾತ ತನ್ನ ಅತ್ತೆ ಕದ್ರಾ ಎಂಬಲ್ಲಿನ ಮಹಮ್ಮದಬೀ ಎಂಬಾಕೆಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳ ನಡೆದಿದೆ ಎನ್ನಲಾಗಿದೆ.

ಮಹಮ್ಮದಬೀ ತನ್ನ ಮಗಳ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾಗ, ನನ್ನ ಮಗುವನ್ನ ನೋಡು ನೀವು ಯಾಕೆ ಬಂದಿದ್ದೀರಿ? ಎಂದು ತಕರಾರು ತೆಗೆದ ರಮಜಾನ್​ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮದ್ಯದ ಅಮಲಿನಲ್ಲಿ ಆಕೆಯ ಹೊಟ್ಟೆಗೆ ಚಾಕುವನ್ನು ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!