Wednesday, June 3, 2026
Homeತಾಜಾ ಸುದ್ದಿಕಾರ್ಯಕರ್ತರ ಮುಂದೆ ತಮ್ಮ ಮರ್ಯಾದೆ ತಾವೇ ತೆಗೆದುಕೊಂಡ ಮಹಮ್ಮದ್ ನಲಪಾಡ್; ನಾನು ಯಾರು ಎಂದು ಕೇಳಿದಾಗ...

ಕಾರ್ಯಕರ್ತರ ಮುಂದೆ ತಮ್ಮ ಮರ್ಯಾದೆ ತಾವೇ ತೆಗೆದುಕೊಂಡ ಮಹಮ್ಮದ್ ನಲಪಾಡ್; ನಾನು ಯಾರು ಎಂದು ಕೇಳಿದಾಗ ಗೊತ್ತಿಲ್ಲ ಎಂದ ಜನ

- Advertisement -
- Advertisement -

ಚಿತ್ರದುರ್ಗ: ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ತಮ್ಮ ಮರ್ಯಾದೆ ತಾವೇ ತೆಗೆದುಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಗೆಪಾಟೀಲಿಗೀಡಾದ ನಡೆದಿದೆ. ನಲಪಾಡ್ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮಲ್ಲಿ ಎಷ್ಟು ಜನಕ್ಕೆ ನಾನು ಯಾರು ಅನ್ನೋದು ಗೊತ್ತಿದೆ ಮತ್ತು ಗೊತ್ತಿರುವವರು ಕೈ ಮೇಲೆತ್ತಿ ಎಂಬಂತೆ ತನ್ನ ಕೈ ಮೇಲೆತ್ತಿ ಹೇಳುತ್ತಾರೆ.

ಆದರೆ  ಒಬ್ಬನೇ ಒಬ್ಬ ಕಾರ್ಯಕರ್ತ ಕೈ ಎತ್ತುವುದಿಲ್ಲ. ಆಗ ನಲಪಾಡ್ ಯಾರಿಗೂ ಗೊತ್ತಿಲ್ವಾ ಎನ್ನುತ್ತಾರೆ. ಹೀಗೆ ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಬಿಲ್ಡಪ್ ಕೊಡಲು ಹೋಗಿ ತಾವೇ ಪೇಚಿಗೆ ಸಿಲುಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಹಣ ಕೊಟ್ಟು ಕಾರ್ಯಕರ್ತರನ್ನು ಕರೆ ತಂದ್ರೆ ಹೀಗೆ ಆಗೋದು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!