Friday, September 13, 2024
Homeತಾಜಾ ಸುದ್ದಿಲಾಕ್​ಡೌನ್​ ನಿಯಮ ಮೀರಿದರೆ ಕೊರೋನಾದಿಂದ ರಕ್ಷಣೆ ಅಸಾಧ್ಯ: ಮಾನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಲಾಕ್​ಡೌನ್​ ನಿಯಮ ಮೀರಿದರೆ ಕೊರೋನಾದಿಂದ ರಕ್ಷಣೆ ಅಸಾಧ್ಯ: ಮಾನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

spot_img
- Advertisement -
- Advertisement -

ನವದೆಹಲಿ: ಇಂದಿನ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರೊನಾ ಸೋಂಕಿನಿಂದ ಜನರ ರಕ್ಷಣೆ ಮಾಡಲು ಇದ್ದ ಏಕೈಕ ಮಾರ್ಗ ಲಾಕ್​ಡಾನ್​. ಹೀಗಾಗಿ ಇದನ್ನು ಜಾರಿಗೊಳಿಸಬೇಕಾಯಿತು. ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಹಲವು ಮಂದಿ ನನ್ನ ಮೇಲೆ ಕೋಪಗೊಂಡಿದ್ದಾರೆ. ನೀವು ಹಾಗೂ ನಿಮ್ಮ ಕುಟುಂಬದ ರಕ್ಷಣೆಗಾಗಿ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

ಲಾಕ್​ಡೌನ್​ ಲಕ್ಷ್ಮಣ ರೇಖೆಯನ್ನು ಯಾರು ದಾಟಬಾರದು. ಕರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ. ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿದೆ. ಇದರ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ನಾವು ಕೂಡ ಹೋರಾಟ ಮಾಡಬೇಕಾಗಿದೆ. ಲಾಕ್​ಡೌನ್​ ಕರೊನಾ ವಿರುದ್ಧದ ಹೋರಾಟ. ಈ ನಿರ್ಧಾರ ಕೈಗೊಂಡಿದ್ದಕ್ಕೆ ನಾನು ನಿಮ್ಮಲಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.

ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಟ ಆರಂಭಿಸಿರುವ ಬೆಂಗಳೂರಿನ ವೈದ್ಯ ನಿರಂಜನ್​ ಸುಧಾಕರ್​ ಅವರ ಸೇವೆಯನ್ನು ಈ ವೇಳೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದರು. 2020ನೇ ವರ್ಷವನ್ನು ವೈದ್ಯರು ಹಾಗೂ ನರ್ಸ್​ಗಳಿಗೆ ಮೀಸಲು ಇಡುವುದಾಗಿ ಅವರು ತಿಳಿಸಿದರು.
ಡೆಲವರಿ ಹುಡುಗರು ಹಾಗೂ ಬ್ಯಾಂಕ್​ ಸಿಬ್ಬಂದಿ ಸೇವೆ ಕೂಡ ಮರೆಯುವಂತಿಲ್ಲ. ಒಟ್ಟಾರೆ ಎಲ್ಲರೂ ಕರೊನಾ ವಿರುದ್ಧ ಸಮರಕ್ಕೆ ಮುಂದಾಗಿದ್ದೀರಿ. ಕರೊನಾ ವೈರಸ್​ ಸೋಂಕಿನ ಲಕ್ಷಣ ಗೋಚರಿಸುತ್ತಿದ್ದಂತೆ ಮನೆಗಳಲ್ಲಿ ಕ್ವಾರಂಟೈನ್​ ಆಗಿ. ಮಾಹಿತಿಯನ್ನು ಸಮೀಪದ ವೈದ್ಯರಿಗೆ ತಿಳಿಸಿದೆ ಎಂದು ಅವರು ಮನವಿ ಮಾಡಿದರು.

- Advertisement -
spot_img

Latest News

error: Content is protected !!