Tuesday, December 3, 2024
Homeಪ್ರಮುಖ-ಸುದ್ದಿಕೊರೋನ ಮಹಾಮಾರಿ : ಸಿಗರೇಟ್ ಸೇದುವವರು ಹುಷಾರಾಗಿರಿ

ಕೊರೋನ ಮಹಾಮಾರಿ : ಸಿಗರೇಟ್ ಸೇದುವವರು ಹುಷಾರಾಗಿರಿ

spot_img
- Advertisement -
- Advertisement -

ಬೆಂಗಳೂರು: ಸಿಗರೇಟ್ ಸೇದುವವರಿಗೆ ಕೊರೋನ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರಾಜ್ಯ ಸರಕಾರದ ತಂಬಾಕು ನಿಯಂತ್ರಣ ಕುರಿತ ಉನ್ನತ ಸಮಿತಿಯು ತಯಾರಿಸಿದ ವರದಿ ತಿಳಿಸಿದೆ. ತಮಗೆ ಧೂಮಪಾನ ಹರಡುವುದಿಲ್ಲ ಎಂದು ನೆಮ್ಮದಿಯಾಗಿದ್ದ ಧೂಮಪಾನಿಗಳಿಗೆ ಈ ವರದಿ ಶಾಕ್ ನೀಡಿದೆ. ಕೊರೋನ ಸೋಂಕು ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದಲ್ಲಿ ಅವರ ಮೇಲೆ ಸೋಂಕು ಕ್ಷಿಪ್ರವಾಗಿ ಪರಣಾಮ ಬೀರುತ್ತದೆ. ಕ್ಷಯ ರೋಗಕ್ಕೂ ತುತ್ತಾಗಬಹುದು ಎಂದು ವರದಿ ತಿಳಿಸಿದೆ.

ವರದಿಯ ಬಗ್ಗೆ ಮಾಹಿತಿ ನೀಡಿರುವ ಸಮಿತಿಯ ಸದಸ್ಯ ಡಾ. ಯು.ಎಸ್. ವಿಶಾಲ್ ರಾವ್, ಧೂಮಪಾನ ಮಾಡುವವರಿಗೆ ಸಹಜವಾಗಿ ಉಸಿರಾಟದ ತೊಂದರೆ ಇರುತ್ತದೆ. ಇದರಿಂದ ಧೂಮಪಾನಿಗಳು ಕೊರೋನ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪರೋಕ್ಷ ಧೂಮಪಾನವೂ ಸಹ ಶ್ವಾಸಕೋಶ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೃದಯ ಮತ್ತು ಉಸಿರಾಟದ ತೊಂದರೆಯೂ ಉಂಟಾಗುತ್ತದೆ.

ಲಾಕ್‍ ಡೌನ್ ಆಗಿರುವವರೂ ಧೂಮಪಾನ ಮಾಡುವುದರಿಂದ ಇಡೀ ತಮ್ಮ ಕುಟುಂಬಕ್ಕೆ ಸೋಂಕು ತಗುಲುವಂತೆ ಮಾಡುತ್ತಾರೆ. ಆದ್ದರಿಂದ ಇರುವ 21 ದಿನಗಳ ಲಾಕ್‍ ಡೌನ್ ಬಳಸಿಕೊಂಡು ಧೂಮಪಾನ ವ್ಯಸನದಿಂದ ಮುಕ್ತರಾಗಬಹುದು ಎಂದು ಅವರು ಸಲಹೆ ನೀಡಿದ್ದಾರೆ.

- Advertisement -
spot_img

Latest News

error: Content is protected !!