- Advertisement -
- Advertisement -
ಭಾರತದಲ್ಲಿ ಕೊರೋನಾ ಸೋಂಕಿತರಲ್ಲಿ ಪುರುಷರೇ ಹೆಚ್ಚು ಮತ್ತು ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಗಜಿಯಾಬಾದ್ ನ ಸಂತೋಷ್ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಡಾ ಅನುಪಮ್ ಸಿಂಗ್ ವರದಿ ತಯಾರಿಸಿದ್ದಾರೆ. ಕೊರೋನಾ ಸೋಂಕಿತರಲ್ಲಿ ಭಾರತದಲ್ಲಿ ಶೇಕಡಾ 65ರಷ್ಟು ಪುರುಷರಾಗಿದ್ದು ಶೇಕಡಾ 35ರಷ್ಟು ಮಹಿಳೆಯರಿದ್ದಾರೆ.
ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 60:40ರ ಅನುಪಾತದಲ್ಲಿದೆ. ಭಾರತದಲ್ಲಿ ಇದುವರೆಗೆ ಮೃತಪಟ್ಟ ಕೊರೋನಾ ಪೀಡಿತರಲ್ಲಿ 60 ವರ್ಷದ ಆಸುಪಾಸಿನವರು ಹೆಚ್ಚು ಮಂದಿ ಇದ್ದಾರೆ. ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರಲ್ಲಿ ಶೇಕಡಾ 3.6 ಮಂದಿಗೆ ಇದು ಕಂಡುಬಂದಿದ್ದು ಅವರಲ್ಲಿ 26 ಮಂದಿಯಲ್ಲಿ ಸೋಂಕು ತಗುಲಿದೆ.
ಕೋವಿಡ್19ಇಂಡಿಯಾ.ಒಆರ್ ಜಿ ಮೂಲಕ ಸಂಗ್ರಹಿಸಿದ ಅಂಕಿಅಂಶ ಆಧಾರದ ಮೇಲೆ ಡಾ ಸಿಂಗ್ ಈ ವಿಶ್ಲೇಷಣೆ ಮಾಡಿದ್ದು ಈ ಸಂಘಟನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರ್ವಜನಿಕ ಮಾಹಿತಿ ಕೇಂದ್ರಗಳ ಮೂಲಕ ವಿಷಯಗಳನ್ನು ಕ್ರೋಢೀಕರಿಸಿದೆ.
- Advertisement -