Thursday, June 4, 2026
Homeಕೊಡಗುಕೊಡಗಿನ ಯೋಧ ಆಲ್ತಾಫ್ ಕುಟುಂಬಕ್ಕೆ ಪರಿಹಾರ ನೀಡಿ: ವಿಧಾನ ಪರಿಷತ್ ನಲ್ಲಿ ಎಂಎಲ್ಸಿ ಇಬ್ರಾಹಿಂ ಒತ್ತಾಯ

ಕೊಡಗಿನ ಯೋಧ ಆಲ್ತಾಫ್ ಕುಟುಂಬಕ್ಕೆ ಪರಿಹಾರ ನೀಡಿ: ವಿಧಾನ ಪರಿಷತ್ ನಲ್ಲಿ ಎಂಎಲ್ಸಿ ಇಬ್ರಾಹಿಂ ಒತ್ತಾಯ

- Advertisement -
- Advertisement -

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಹಿಮಗಡ್ಡೆಯಲ್ಲಿ ಸಿಲುಕಿ ಮೃತಪಟ್ಟ ಕೊಡಗಿನ ಯೋಧ ಅಲ್ತಾಫ್ ಅಹಮದ್ ಕುಟುಂಬಕ್ಕೆ
ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ನಲ್ಲಿ ಒತ್ತಾಯ ವ್ಯಕ್ತವಾಗಿದೆ.

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ವಿಷಯ ಪ್ರಸ್ತಾಪಿಸಿ, ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿಯೂ ಅಂತಿಮ ನಮನ ಸಲ್ಲಿಕೆ ಮಾಡಲಿಲ್ಲ, ಕೂಡಲೇ ಪರಿಹಾರ ಕೊಡಿ, ಆತನ ಕುಟುಂಬಕ್ಕೆ ಮನೆ ಇಲ್ಲ. ಅ ಕುಟುಂಬಕ್ಕೆ ನಿವೇಶನ ನೀಡಿ‌ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಪರವಾಗಿ ಉತ್ತರ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದೇಶ ಕಾಯುವ ಸೈನಿಕರಿಗೆ ನಮ್ಮ ಸರ್ಕಾರ ಗೌರವ ಕೊಡುತ್ತದೆ, ಪರಿಹಾರ ಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದು ಸದನದಲ್ಲಿ ಭರವಸೆ ನೀಡಿದರು.

ಕಳೆದ ತಿಂಗಳಿನಲ್ಲಿ ಹಿಮಪಾತದಲ್ಲಿ ಸಿಲುಕು ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲ‌ದ ಯೋಧ ಆಲ್ತಾಫ್ ಮೃತಪಟ್ಟಿದ್ದರು.

- Advertisement -

Latest News

error: Content is protected !!