Saturday, October 17, 2026
Homeಕರಾವಳಿಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಮಂಗಳೂರಿನ ಶಾಸಕರಿಬ್ಬರ ಜ್ಯೋತಿ ಬೆಳಗಿಸುವಿಕೆಯ ಫೋಟೋ

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಮಂಗಳೂರಿನ ಶಾಸಕರಿಬ್ಬರ ಜ್ಯೋತಿ ಬೆಳಗಿಸುವಿಕೆಯ ಫೋಟೋ

- Advertisement -
- Advertisement -

ಮಂಗಳೂರು: ಕಾರ್ಯಕ್ರಮದಲ್ಲಿ ಶಾಸಕರಿಬ್ಬರು ದೀಪ ಬೆಳಗಿಸಿರುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.

ತುಳು ಸಿನಿಮಾ ಕಾರ್ಯಕ್ರಮದಲ್ಲಿ ಶಾಸಕ ಯು.ಟಿ. ಖಾದರ್, ಚಪ್ಪಲಿ ತೆಗೆದು ದೀಪ ಬೆಳಗಿಸಿದ್ದರೆ, ಶಾಸಕ ವೇದವ್ಯಾಸ ಕಾಮತ್
ಚಪ್ಪಲಿ ಹಾಕಿಕೊಂಡು ದೀಪ ಬೆಳಗಿಸಿದ್ದಾರೆ. ಮಂಗಳೂರಿನಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ತುಳು ಸಿನಿಮಾ ಕಾರ್ಯಕ್ರಮ ಉದ್ಘಾಟನೆ ವೇಳೆ ಈ ಘಟನೆ‌ ನಡೆದಿದೆ.

ಮುಸ್ಲಿಂ ಸಮುದಾಯದ ನಾಯಕ ಯು.ಟಿ‌‌. ಖಾದರ್ ಗೆ ಇರೋ ಜ್ಞಾನ, ಹಿಂದು ಸಮುದಾಯದ ವೇದವ್ಯಾಸ ಕಾಮತ್ ಗೆ ಇಲ್ಲ ಅಂತಾ ದೀಪ ಬೆಳಗಿಸುವಿಕೆಯ ಫೋಟೋ ಟ್ರೋಲ್ ಆಗಿದೆ.

- Advertisement -

Latest News

error: Content is protected !!