Friday, June 5, 2026
Homeತಾಜಾ ಸುದ್ದಿತಾಳಿ ಕಟ್ಟುವ ಶುಭ ವೇಳೆಯಲ್ಲಿ ವಧುವಿನ ಹೈಡ್ರಾಮಾ: ಮದುವೆ ಮಂಟಪದಿಂದ ಪೊಲೀಸ್ ಠಾಣೆಗೆ ಹೋದ ವರ

ತಾಳಿ ಕಟ್ಟುವ ಶುಭ ವೇಳೆಯಲ್ಲಿ ವಧುವಿನ ಹೈಡ್ರಾಮಾ: ಮದುವೆ ಮಂಟಪದಿಂದ ಪೊಲೀಸ್ ಠಾಣೆಗೆ ಹೋದ ವರ

- Advertisement -
- Advertisement -

ಮೈಸೂರು: ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿದ ಪರಿಣಾಮ ಮದುವೆ ಕುಸಿದು ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ತಾಳಿ‌ ಕಟ್ಟುವಾಗ ಕುಸಿದು ಬಿದ್ದಂತೆ ನಟಿಸಿ ಪ್ರಿಯತಮನನ್ನೇ ಮದುವೆಯಾಗುತ್ತೇನೆಂದು ವಧು ಹಠ ಹಿಡಿದಿದ್ದಾಳೆ.

ಮೈಸೂರಿನ ಸುಣ್ಣದಕೇರಿಯ ಯುವತಿಯಿಂದ ಹೈಡ್ರಾಮಾ ನಡೆದಿದ್ದು, ಹೆಚ್.ಡಿ. ಕೋಟೆ ತಾಲ್ಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮುದುವೆ ನಿಶ್ಚಯವಾಗಿತ್ತು. ಪಕ್ಕದ ಮನೆಯವನೊಂದಿಗೆ ವಧು ಪ್ರೀತಿ ಹೊಂದಿದ್ದು, ಪ್ರಿಯಕರನಿಂದ ವರನಿಗೆ ಮದುವೆಯಾಗದಂತೆ ಮೆಸೇಜ್ ಬಂದ ಕಾರಣ ವರನ ಪೋಷಕರು ವಧುವನ್ನು ತರಾಟೆಗೆತ್ತಿಕೊಂಡಿದ್ದಾರೆ.

ಮದುವೆಗಾಗಿ 5 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದ ವರನ ಪೋಷಕರು ಹಣ ವಾಪಸ್ಸು ಕೊಡುವಂತೆ ಪಟ್ಟು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

- Advertisement -

Latest News

error: Content is protected !!