Saturday, June 6, 2026
Homeಕರಾವಳಿಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 12 ವರ್ಷ: ದುರಂತದಲ್ಲಿ ಮಡಿದವರಿಗೆ ನಮನ ಸಲ್ಲಿಸಿದ ಸಂಸದ...

ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 12 ವರ್ಷ: ದುರಂತದಲ್ಲಿ ಮಡಿದವರಿಗೆ ನಮನ ಸಲ್ಲಿಸಿದ ಸಂಸದ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಮಂಗಳೂರು: ಬಜ್ಪೆಯ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಇಂದಿಗೆ 12 ವರ್ಷ. ವಿಮಾನ ದುರಂತದಲ್ಲಿ ಮಡಿದವರಿಗೆ ಇಂದು ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದುರಂತದಲ್ಲಿ ಮಡಿದ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯ ಸ್ಮರಣಾರ್ಥ ನಗರದ ಕೂಳೂರಿನ ತಣ್ಣೀರುಬಾವಿಯ ಬಳಿಯಿರುವ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ಸ್ಮಾರಕಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಸಂಸದ ನಳೀನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಡಾ.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ಮಂಗಳೂರು ತಹಶೀಲ್ದಾರ್ ಪುರಂದರ್ ಹಾಗೂ ಇತರ ಗಣ್ಯರು ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

- Advertisement -

Latest News

error: Content is protected !!