Saturday, June 6, 2026
Homeಕರಾವಳಿಮಂಗಳೂರಿನಲ್ಲಿ ದರ್ಗಾ ನವೀಕರಣ ವೇಳೆ ಗುಡಿ‌ ಮಾದರಿ‌ ಪತ್ತೆ ಹಿನ್ನೆಲೆ : ಮೇ 25 ಕ್ಕೆ...

ಮಂಗಳೂರಿನಲ್ಲಿ ದರ್ಗಾ ನವೀಕರಣ ವೇಳೆ ಗುಡಿ‌ ಮಾದರಿ‌ ಪತ್ತೆ ಹಿನ್ನೆಲೆ : ಮೇ 25 ಕ್ಕೆ ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಇರಿಸಲು ತೀರ್ಮಾನ

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠದ ಮಳಲಿ ಬಳಿ ದರ್ಗಾ ನವೀಕರಣ ಕಾರ್ಯದ ವೇಳೆ ದೇವಸ್ಥಾನದ ಗುಡಿ ಪತ್ತೆಯಾಗಿದ್ದ ವಿಚಾರದಲ್ಲಿ ತಾಂಬೂಲ ಪ್ರಶ್ನೆಗೆ ದಿನಾಂಕ ನಿಗದಿಯಾಗಿದೆ.

ಮೇ 25ಕ್ಕೆ ತಾಂಬೂಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ನಿಂದ ದಿನಾಂಕ ನಿಗದಿ ಮಾಡಲಾಗಿದ್ದು, ಅಷ್ಟಮಂಗಲ‌ ಪ್ರಶ್ನೆಯ ಬದಲಿಗೆ ತಾಂಬೂಲ ಪ್ರಶ್ನೆ ಇರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಮಳಲಿಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದ್ದು,
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಸೇರಿ ಹಿಂದೂ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಇರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ‌ ಮಸೀದಿಯಲ್ಲಿ‌ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು.

ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದ್ದ ಕಾರಣ ನವೀಕರಣ ಕಾಮಗಾರಿಗೆ ವಿಶ್ವ ಹಿಂದೂ ಪರಿಷತ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿತ್ತು.‌

- Advertisement -

Latest News

error: Content is protected !!