Friday, June 5, 2026
Homeಕರಾವಳಿಉಡುಪಿಉಡುಪಿಯಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ : ಆತ್ಮಹತ್ಯೆಗೂ ಮುನ್ನ ವಾಟ್ಸಪ್ ನಲ್ಲಿ ಲೊಕೇಶನ್ ಕಳುಹಿಸಿದ್ದ ಮೃತ...

ಉಡುಪಿಯಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ : ಆತ್ಮಹತ್ಯೆಗೂ ಮುನ್ನ ವಾಟ್ಸಪ್ ನಲ್ಲಿ ಲೊಕೇಶನ್ ಕಳುಹಿಸಿದ್ದ ಮೃತ ಯಶವಂತ್

- Advertisement -
- Advertisement -

ಉಡುಪಿ: ಬೆಂಗಳೂರಿನ ಯಶವಂತ್ ಯಾದವ್ ಮತ್ತು ಜ್ಯೋತಿ ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೂ ಮೊದಲು ಯಶವಂತ್ ವಾಟ್ಸಪ್ ಸಂದೇಶ ರವಾನೆ ಮಾಡಿದ್ದ ವಿಚಾರ ತಿಳಿದುಬಂದಿದೆ.‌

ಇಂದು ಮುಂಜಾನೆ 3 ಗಂಟೆ 02 ನಿಮಿಷಕ್ಕೆ ವಾಟ್ಸಪ್ ಮೆಸೇಜ್ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದಲೇ ಮೆಸೇಜ್ ಕಳುಹಿಸಿದ್ದಾನೆ.‌

ಇದರ ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಲೊಕೇಶನ್ ಕೂಡಾ ಯಶವಂತ್ ಕಳುಹಿಸಿದ್ದು, ಬೆಳಗ್ಗಿನ‌ ಜಾವ 3:15 ಗಂಟೆ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹೆತ್ತವರು ಇಲ್ಲದೇ ನಾವು ಬದುಕಲು ಆಗುವುದಿಲ್ಲ, ಅವಳಿಗೆ ಮೋಸ ಮಾಡಿ ವಾಪಸ್ ಬರುವುದು ಸಾಧ್ಯವಿಲ್ಲ, ಬಾಡಿಗೆ ಮನೆ ಮತ್ತು ಉದ್ಯೋಗ ಕೂಡಾ ಸಿಕ್ಕಿದೆ,ಆದರೂ ನಾವು ಸಂತೋಷವಾಗಿಲ್ಲ, ಒಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಕ್ಷಮಿಸಿಬಿಡಿ ಎಂದು ತನ್ನ ಸಹೋದರನಿಗೆ ಮೃತ ಯಶವಂತ್ ಯಾದವ್ ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!