Friday, June 5, 2026
Homeಕರಾವಳಿಉಡುಪಿ"ಬಿಜೆಪಿಗೆ ಸೇರಿರುವ ಅಣ್ಣಾಮಲೈ ತಮಿಳುನಾಡಿನ ಅಣ್ಣ ಆಗಿ ಮೂಡಿಬರಲಿ"

“ಬಿಜೆಪಿಗೆ ಸೇರಿರುವ ಅಣ್ಣಾಮಲೈ ತಮಿಳುನಾಡಿನ ಅಣ್ಣ ಆಗಿ ಮೂಡಿಬರಲಿ”

- Advertisement -
- Advertisement -

ಉಡುಪಿ: ಬಿಜೆಪಿ ಸೇರಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಉತ್ತಮ ಕಾರ್ಯಗಳ ಮೂಲಕ ತಮಿಳುನಾಡಿನ ಅಣ್ಣ ಆಗಿ ಮೂಡಿಬರಲಿ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

ಕಾರ್ಕಳದಿಂದ ಖಡಕ್ ಪೊಲೀಸ್ ಅಧಿಕಾರಿ ಆಗಿ ಅಣ್ಣಾಮಲೈ ಕರ್ತವ್ಯ ಆರಂಭಿಸಿದವರು. ನಂತರ ದಿನಗಳಲ್ಲಿ ಉಡುಪಿ, ಚಿಕ್ಕಮಗಳೂರು ಬೆಂಗಳೂರಿನಲ್ಲಿ ಎಸ್‍ಪಿಯಾಗಿ ಜನಮನ್ನಣೆ ಪಡೆದವರು. ಅಣ್ಣಾಮಲೈ ಬಿಜೆಪಿ ಸೇರಿದ್ದು ಬಹಳ ಸಂತೋಷವಾಗಿದೆ ಎಂದರು.

ಅಣ್ಣಾಮಲೈ ಕರ್ತವ್ಯದಲ್ಲಿ ಇದ್ದಾಗಲೇ ಜನಪರ ಯೋಚನೆ ಮಾಡಿದ ವ್ಯಕ್ತಿ. ಅವರ ಯೋಜನೆಗಳು ಮುಂದೆ ಜನಪರವಾಗಿಯೇ ಇರುತ್ತದೆ. ಅಣ್ಣಾಮಲೈ ರಾಜಕೀಯ ಜೀವನ ಉಜ್ವಲವಾಗಲಿ. ತಮಿಳುನಾಡಿನಲ್ಲಿ ಬಿಜೆಪಿ ಬೇರು ಗಟ್ಟಿಯಾಗಲಿ. ಅಣ್ಣಾಮಲೈಯವರು ತಮಿಳುನಾಡಿನ ಅಣ್ಣ ಅಗಿ ಮೂಡಿಬರಲಿ ಎಂದು ಹಾರೈಸಿದರು.

- Advertisement -

Latest News

error: Content is protected !!