Saturday, May 4, 2024
Homeತಾಜಾ ಸುದ್ದಿಕಚೇರಿಯಲ್ಲೇ ಸಹೋದ್ಯೋಗಿ ಮಹಿಳೆಗೆ ಕಿಸ್ ಕೊಟ್ಟ ತಹಶೀಲ್ದಾರ್!

ಕಚೇರಿಯಲ್ಲೇ ಸಹೋದ್ಯೋಗಿ ಮಹಿಳೆಗೆ ಕಿಸ್ ಕೊಟ್ಟ ತಹಶೀಲ್ದಾರ್!

spot_img
- Advertisement -
- Advertisement -

ಕೊಪ್ಪಳ: ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ಕುಷ್ಟಗಿಯ ತಹಸೀಲ್ದಾರ್, ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಮಹಿಳೆಯೊಂದಿಗೆ ರೊಮ್ಯಾನ್ಸ್ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿಯ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಸದ್ಯ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ತಹಶಿಲ್ದಾರರಾಗಿರುವ ಗುರುಬಸವರಾಜ್, ಈ ಹಿಂದೆ ಕುಷ್ಟಗಿಯ ತಹಶಿಲ್ದಾರ್​ ಆಗಿ ಕಾರ್ಯ ವಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ತಮ್ಮ ತಹಶಿಲ್ದಾರ್ ಚೆಂಬರ್​ನಲ್ಲೆ ತನ್ನ ಸಹೋದ್ಯೋಗಿಗೆ ಕಿಸ್ ಮಾಡಿದ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

ಗುರುಬಸವರಾಜ್

ಎಂಟು ತಿಂಗಳ ಹಿಂದೇ ಈ ಕಿಸ್ಸಿಂಗ್ ಸೀನ್ ನಡೆದಿದೆ ಎನ್ನಲಾಗಿದ್ದು, ಕಿಸ್ಸಿಂಗ್ ರಾಧಾಂತ ಆಗುತ್ತಲೇ ಗುರುಬಸವರಾಜ್, ಕುಷ್ಟಗಿಯಿಂದ ವರ್ಗಾವಣೆಯಾಗಿದ್ದಾರೆ.

ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ರಾಸಲೀಲೆ ಮಾಡಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ ಅಂತ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!