- Advertisement -
- Advertisement -
ಮಂಗಳೂರು: ಮುಂಬೈ ಮಹಾನಗರಕ್ಕೆ ಕರಾವಳಿ ಸೊಗಡಿನ ಪಿಲಿ ನಲಿಕೆಯನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಪಿಲಿ ನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
ಈ ಕುರಿತಂತೆ ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮುಂಬೈ ಮಹಾನಗರದಲ್ಲಿ ಸ್ಪರ್ಧೆ ಏರ್ಪಡಿಸುವ ಯೋಜನೆ ಇದ್ದು, ಪಿಲಿ ನಲಿಕೆ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಚಿತ್ರನಟ ಸುನಿಲ್ ಶೆಟ್ಟಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ. ಇನ್ನು ಹಿಂದಿ ಚಿತ್ರರಂಗದ ನಟ-ನಟಿಯರನ್ನು ತಂಡಗಳ ಮಾಲೀಕತ್ವ ವಹಿಸುವಂತೆ ಕೋರಲಾಗುವುದು ಎಂದು ಹೇಳಿದರು.
- Advertisement -