Saturday, May 11, 2024
Homeಕರಾವಳಿಮಂಗಳೂರು : ಬಿಲ್ ಪಾವತಿಗಾಗಿ  ನಿವೃತ್ತ ಅರಣ್ಯಾಧಿಕಾರಿಗೆ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ...

ಮಂಗಳೂರು : ಬಿಲ್ ಪಾವತಿಗಾಗಿ  ನಿವೃತ್ತ ಅರಣ್ಯಾಧಿಕಾರಿಗೆ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ ; ಒಂದು ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಉಪಕೃಷಿ ನಿರ್ದೇಶಕಿ ಲೋಕಾ ಬಲೆಗೆ

spot_img
- Advertisement -
- Advertisement -

ಮಂಗಳೂರು : ಬಿಲ್ ಪಾವತಿಗೆ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಒಡ್ಡಿದ ಮಹಿಳಾ ಅಧಿಕಾರಿ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ.

ದೂರುದಾರರಾದ ಪರಮೇಶ್.ಎನ್.ಪಿರವರು, ಕರ್ನಾಟಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಯಾಗಿದ್ದು,ನಿಯೋಜನೆ ಮೇರೆಗೆ ಕರ್ನಾಟಕ ಜಲಾನಲಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜನಾಂಕ 31.08.2023ರಂದು ದಕ್ಷಿಣ ಕನ್ನಡ ಜಿಲ್ಲೆಯ ವಲಯ ಅರಣ್ಯ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ತಾನು ಕರ್ತವ್ಯ ನಿರ್ವಹಿಸುತ್ತಿರುವ ಸಮಯ 2022-23 ಮತ್ತು 2023-24ನೇ ಹಾಲನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WIDC.2,0” ಯೋಜನೆಯ ಬಂಟ್ವಾಳ ತಾಲೂಕು ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪಪಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮಗಳ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ಸುಮಾರು ರೂ. 50,00,000/- ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಿ, ಸ್ವಲ್ಪ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲೀಕರಾದ ಧೋರಿ, ಶಬರೀಶ್ ನರ್ಸರಿಯ ಬೈರೇ ಗೌಡ ಮುಂತಾದವರಿಂದ ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡಿ ನಾಟಿ ಕಾಮಗಾರಿ ಮಾಡಲಾಗಿರುವುದಾಗಿದೆ. ಸಲ್ಪ ನರ್ಸರಿ ಗಿಡಗಳನ್ನು ಮಾಲಕರುಗಳಿಂದ ಪಡೆದು ಆವರಿಗೆ ನೀಡಬೇಕಾದ ಹಣ ರೂ. 8,00,000/- ಹಾಗೂ ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ ಬಾಬ್ತು ಅಂದಾಜು ರೂ. 32,00,000/- ಹಣವನ್ನು ಬಾಕಿ ಉಳಿಸಿ ಸಸಿಗಳನ್ನು ಮುಂಗಡವಾಗಿ ಪಡೆದು ನಾಟಿ ಮಾಡಿರುವುದಾಗಿದೆ.

ಸದ್ರಿ ಮಾಲೀಕರಿಗೆ/ಅರಣ್ಯ ಗುತ್ತಿಗೆದಾರರಿಗೆ ಸಸಿಗಳನ್ನು ಪೂರೈಸಿದ ಹಾಗೂ ನಾಟಿ ಮಾಡಿದ ಬಾಲ್ತು ಸುಮಾರು ರೂ 50,00,000/-ಗಳು ಸರ್ಕಾರದಿಂದ ಬರಲು ಬಾಕಿ ಇದ್ದು, ಈ ಹಣವನ್ನು ಒದಗಿಸುವಂತೆ ಮಾಲಕರು/ಗುತ್ತಿಗೆದಾರರು ದೂರುದಾರರಲ್ಲಿ ಆಗಾಗ್ಗೆ ಹೇಳುತ್ತಿದ್ದು, ಮಾಲಕರು/ಗುತ್ತಿಗೆದಾರರ ಬಿಲ್ಲು ಸುಮಾರು ರೂ. 50,00,000/- ಗಳನ್ನು ಪಾವತಿಸುವಂತೆ, ಬಿಲ್ಲ ಪಾವತಿ ಮಾಡುವ ಅಧಿಕಾರಿಯವರಾದ ಶ್ರೀಮತಿ ಭಾರತಮ್ಮ, ಉಪ ಕೃಷಿ ನಿರ್ದೇಶಕರು, ಮಂಗಳೂರು ವಿಭಾಗ ಇವರ ಮಾಲಕರು ಗುತ್ತಿಗೆದಾರರ ಪರವಾಗಿ ದೂರುದಾರ ದಿನಾಂಕ 04.02023 ರಂದು ಭೇಟಿಯಾಗಿ ಕೇಳಿಕೊಂಡಾಗ ಅವರು ಸದ್ರಿ ಬಿಲ್ ಪಾವತಿಸಬೇಕಾದರೆ, ಬಿಲ್ ಮೊತ್ತದ 18% ಹಣವನ್ನು ಮುಂಗಡವಾಗಿ ತನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೆ ತಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿರುತ್ತಾರೆ. ದೂರುದನಡೆದಿದೆ..ನಾಂಕ 20.10.2023 ರಂದು ಮಂಗಳೂರು ಉಪ ಕೃಷಿ ನಿರ್ದೇಶಕರ ಕಛೇರಿಗೆ ಹೋಗಿ, ಮಂಗಳೂರು ಉಪ ಕೃಷಿ ನಿರ್ದೇಶಕರಾದ  ಭಾರತಮ್ಮ ಇವರ ಛೇಂಬರ್‌ಗೆ ಹೋಗಿ ಸರ್ಕಾರದಿಂದ ಪಾವತಿಯಾಗಬೇಕಾದ ಬಿಲ್ ಬಗ್ಗೆ ಮಾತನಾಡಿದಾಗ ಅವರು ರೂ.1,00,000/- (ಒಂದು ಲಕ್ಷ) ಲಂಚದ ಹಣಕ್ಕೆ ಬೇಡಿಕೆಯನ್ನು ಇರುತ್ತಾರೆ.

ಆಕ್ಟೋಬರ್ 21 ರಂದು (ಇಂದು) ಮಂಗಳೂರು ಉಪ ಕೃಷಿ ನಿರ್ದೇಶಕರಾದ ಶ್ರೀಮತಿ ಭಾರತಮ್ಮ ರವರು ದೂರುದಾರಿಂದ ರೂ.1,00,000/- (ಒಂದು ಲಕ್ಷ) ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳೂರು ಲೋಕಾಯುಕ್ತ ಎಸ್ಪಿ ಶ್ರೀ ಸಿ.ಎ. ಸೈಮನ್  ಮಾರ್ಗದರ್ಶನದಲ್ಲಿ , ಡಿವೈಎಸ್ಪಿ  ಶ್ರೀಮತಿ ಕಲಾವತಿ,ಕೆ, ಡಿವೈಎಸ್ಪಿ ಶ್ರೀ ಚಲುವರಾಜು,ಹಾಗೂ ಇನ್ಸ್ಪೆಕ್ಟರ್ ಸುರೇಶ್, ಕುಮಾರ್‌.ಪಿ ಮತ್ತು ಸಿಬ್ಬಂದಿ  ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!