Tuesday, June 9, 2026
Homeಕರಾವಳಿಉಡುಪಿಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

- Advertisement -
- Advertisement -

ಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ನೂರಲ್‌ಬೆಟ್ಟಿನಲ್ಲಿ ನಡೆದಿದೆ. ಗಾಂದೊಟ್ಟು ಹೊಸಮನೆ ನಿವಾಸಿ ಸುಜಯ ದೇವಾಡಿಗ (36) ಮೃತ ವ್ಯಕ್ತಿ. ಇವರು ಫೆ. 18ರಂದು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಫೆ.20ರಂದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಫೆ. 21ರಂದು ಮನೆಯಿಂದ 1½ ಕೀ ಮೀ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಜಯ ಅವರು ಅವಿವಾಹಿತರಾಗಿದ್ದು, ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಳಗೆ ಬಿದ್ದ ಸ್ಥಳದಲ್ಲಿ ಕಲ್ಲುಗಳಿದ್ದರಿಂದ ದೇಹದ ಭಾಗಗಳಿಗೆ ಗಾಯಗಳಾಗಿರುತ್ತದೆ.ಈ ಬಗ್ಗೆ ಅವರ ಅಣ್ಣ ಉದಯ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!