Saturday, August 29, 2026
Homeಕರಾವಳಿಸುಳ್ಯ; ಕೇನ್ಯದಲ್ಲಿ ಇಬ್ಬರು ಬಾಲಕಿಯರು ಹೊಳೆಯಲ್ಲಿ ನಾಪತ್ತೆ ಪ್ರಕರಣ: ಇಬ್ಬರ ಮೃತದೇಹವೂ ಪತ್ತೆ

ಸುಳ್ಯ; ಕೇನ್ಯದಲ್ಲಿ ಇಬ್ಬರು ಬಾಲಕಿಯರು ಹೊಳೆಯಲ್ಲಿ ನಾಪತ್ತೆ ಪ್ರಕರಣ: ಇಬ್ಬರ ಮೃತದೇಹವೂ ಪತ್ತೆ

- Advertisement -
- Advertisement -

ಸುಳ್ಯ; ಬಳ್ಪದ ಕೇನ್ಯ ಸಮೀಪದ ಕೇನ್ಯ ಕಣ್ಕಲ್ ಬಳಿ ಕುಮಾರಧಾರ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಮೃತದೇಹ ಇದೀಗ ಪತ್ತೆಯಾಗಿದೆ.

ಮೂಲತಃ ಕಣ್ಕಲ್ ನವರಾದ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ (11)  ರಜೆಯಲ್ಲಿ ಊರಿಗೆ ಬಂದಿದ್ದರು. ಇಬ್ಬರು ಹೊಳೆಗೆ ಹೋಗಿದ್ದಾಗ ನೀರು ಪಾಲಾಗಿದ್ದರು. ಇದೀಗ ಇಬ್ಬರ ಮೃತದೇಹವೂ ಪತ್ತೆಯಾಗಿದೆ.

ಸಹೋದರಿಯರು ನೀರುಪಾಲಾದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹ ಮೇಲಕ್ಕೆತ್ತಿದ್ದಾರೆ.  

- Advertisement -

Latest News

error: Content is protected !!