Sunday, June 7, 2026
Homeತಾಜಾ ಸುದ್ದಿಪ್ರೀತಿಸಿ ಮದುವೆಯಾಗಿದ್ದ ಒಂದೇ ತಿಂಗಳಿಗೆ ನವವಿವಾಹಿತೆಯನ್ನು ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ !

ಪ್ರೀತಿಸಿ ಮದುವೆಯಾಗಿದ್ದ ಒಂದೇ ತಿಂಗಳಿಗೆ ನವವಿವಾಹಿತೆಯನ್ನು ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ !

- Advertisement -
- Advertisement -

ಚಿಕ್ಕಬಳ್ಳಾಪುರ: ಸಿನಿಮಾ ಶೈಲಿಯಲ್ಲಿ ನವ ವಿವಾಹಿತೆಯನ್ನು ಅಪಹರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಜಾತವಾರ ಹೊಸಹಳ್ಳಿಯಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲ್ಲೂಕಿನ ಮರಿಹಳ್ಳಿಯ ನಿವಾಸಿ ರಂಜಿತಾ ಅವರನ್ನು ಅಪಹರಿಸಲಾಗಿದೆ. ಚಿಕ್ಕಬಳ್ಳಾಪುರಕ್ಕೆ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರ್, ಆರು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಅಪಹರಿಸಿದ್ದಾರೆ.

ರಂಜಿತಾ ಒಂದು ತಿಂಗಳ ಹಿಂದೆ ಮರಿಹಳ್ಳಿ ಗ್ರಾಮದ ವೆಂಕಟೇಶನನ್ನು ಪ್ರೀತಿಸಿ ಮದುವೆಯಾಗಿದ್ದು ಅಂತರ್ಜಾತಿ ವಿವಾಹವಾಗಿ ಇದ್ದ ಕಾರಣ ಎರಡು ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಮುಖಂಡರು ನ್ಯಾಯ ಪಂಚಾಯಿತಿ ನಡೆಸಿದ್ದರು.

ಎರಡು ಕುಟುಂಬಗಳಿಂದ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವೆಂಕಟೇಶ ಮತ್ತು ರಂಜಿತಾ ಮನವಿ ಮಾಡಿದ್ದು, ಇದಾದ ಒಂದು ತಿಂಗಳ ಅಂತರದಲ್ಲಿ ರಂಜಿತಾ ಅವರನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

ಇದರ ಹಿಂದೆ ಯಾರ ಕೈವಾಡವಿದೆ. ಅಪಹರಣಕ್ಕೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ.

- Advertisement -

Latest News

error: Content is protected !!